1st standard Kannada (Koti mattu Alilu)

 

ಪಾಠ-7 ಕೋತಿ ಮತ್ತು ಅಳಿಲು

 I ಪದಗಳ ಅರ್ಥ ಬರೆಯಿರಿ:-

1.ಗಾಬರಿ = ಹೆದರಿಕೆ.

2.ಕ್ಷಮಿಸು = ಅಪರಾಧವನ್ನು ಮನ್ನಿಸು.

 

 II ಬಿಟ್ಟಿರುವ ಪದಗಳನ್ನು ಬರೆಯಿರಿ:-

1. ಕೋತಿಯ ಬಾಲ ತುಂಬಾ ಉದ್ದವಿತ್ತು.

2.ಒಂದು ಅಳಿಲು ಕುಣಿದಾಡುತ್ತಾ ಅಲ್ಲಿಗೆ ಬಂದಿತು.

3.ಕೋತಿಗೆ ಕಚಗುಳಿ ಆಯಿತು.

4.ಮಂಗಣ್ಣ ಇದು ನಿನ್ನ ಬಾಲವೇ.

 

III ಪ್ರಶ್ನೆಗಳಿಗೆ ಉತ್ತರಿಸಿ:-

1. ಕೋತಿ ಯಾವುದರ ಮೇಲೆ ಕುಳಿತಿತ್ತು?.

A:- ಕೋತಿ ಮರದ ಮೇಲೆ ಕುಳಿತಿತ್ತು.

 

2. ಕೋತಿಯ ಬಾಲ ಹಿಡಿದು ಯಾವುದು ಜೀಕ ತೊಡಗಿತ್ತು?

A:-ಕೋತಿಯ ಬಾಲ ಹಿಡಿದು ಅಳಿಲು ಜೀಕ ತೊಡಗಿತ್ತು.

3.ಮಂಗಣ್ಣ ಇದು ನಿನ್ನ ಬಾಲವೇ ಜೋಕಾಲಿ ಎಂದು ತಿಳಿದು ಜೀಕುತ್ತಿದ್ದ ನನ್ನನ್ನು ಕ್ಷಮಿಸು ಎಂದು ಯಾವುದು ಹೇಳಿತು? A:-ಅಳಿಲು ಕೋತಿಗೆ ಹೇಳಿತು.

 

4. ಅಳಿಲು ಹೇಗೆ ಹೋಗಿ ಮರದ ಕೊಂಬೆಯನ್ನು ಏರಿತು?

A:-ಅಳಿಲು ಓಡಿಹೋಗಿ ಮರದ ಕೊಂಬೆಯನ್ನು ಏರಿತು.

 

 IV ಮಾದರಿಯಂತೆ ವಾಕ್ಯಗಳನ್ನು ಮಾಡೋಣ:-

1. ಕೋತಿ ಒಂದು ಪ್ರಾಣಿ.

2. ಕೋತಿಯು ಮರವನ್ನು ಹತ್ತುತ್ತದೆ.

3. ಕೋತಿಗೆ ಬಾಲವಿದೆ.

4. ಅಳಿಲು ಒಂದು ಪುಟ್ಟ ಪ್ರಾಣಿ.

5. ಕೋತಿ ಮರದ ಮೇಲೆ ಕುಳಿತಿತ್ತು

 

ಚಟುವಟಿಕೆ: ಕೋತಿ ಮತ್ತು ಅಳಿಲಿನ ಚಿತ್ರ ಬರೆದು ಬಣ್ಣ ತುಂಬಿ.

Post a Comment

0 Comments