1st standard Kannada (Ootada Ata)

 

ಪಾಠ -3  ಊಟದ ಆಟ

 

I ಪದಗಳ ಅರ್ಥ ಬರೆಯಿರಿ:-

1. ಪಲ್ಯ = ತರಕಾರಿಯಿಂದ ಮಾಡಿದ ಪದಾರ್ಥ.

2. ದ0ಟು = ಒಂದು ಜಾತಿಯ ತರಕಾರಿ ಸೊಪ್ಪು.

3. ಮುದಿರು = ಮುಚ್ಚು

 

II ಪ್ರಾಸ ಪದಗಳನ್ನು ಬರೆಯಿರಿ:-

 1. ಎರಡು-- ಹರಡು

2. ಆರು--- ಸಾರು

3.  ಎ0 ಟು.----- ದ0ಟು.

4. ಹತ್ತು ---ಎತ್ತು

 

III ಬಿಟ್ಟಿರುವ ಪದವನ್ನು ಬರೆಯಿರಿ:-

1. ಒಂದು ಎರಡು ಬಾಳೆಲೆ ಹರಡು.

2. ಮೂರು ನಾಲ್ಕು ಅನ್ನ ಹಾಕು.

3. ಐದು ಆರು ಬೇಳೆ ಸಾರು.

4. ಏಳು ಎಂಟು ಪಲ್ಯಕೆ ದಂಟು.

5. ಒಂಬತ್ತು ಹತ್ತು ಎಲೆ ಮುದುರಿತ್ತು.

 

IV  ಚಿತ್ರವನ್ನು ನೋಡಿ ಪ್ರಶ್ನೆಗಳಿಗೆ ಉತ್ತರಿಸು:-( Paste pictures of these fruits in your notes)

1. ಹಣ್ಣಿನ ಹೆಸರೇನು?

A:- ಹಣ್ಣಿನ ಹೆಸರು ಮಾವಿನ ಹಣ್ಣು.

 

2. ಇಲ್ಲಿ ಎಷ್ಟು ಹಣ್ಣಿದೆ?

A:- ಇಲ್ಲಿ ಒಂದು ಹಣ್ಣಿದೆ.

 

3. ಚಿತ್ರದಲ್ಲಿರುವ ಹಣ್ಣುಗಳ ಹೆಸರೇನು?

A:- ಚಿತ್ರದಲ್ಲಿರುವ ಹಣ್ಣುಗಳ ಹೆಸರು ಸೇಬು.

 

4. ಇಲ್ಲಿ ಎಷ್ಟು ಹಣ್ಣುಗಳಿವೆ?

A:-. ಇಲ್ಲಿ ಎರಡು ಹಣ್ಣುಗಳಿವೆ.

 

5. ಚಿತ್ರದಲ್ಲಿ ಎಷ್ಟು ಹಣ್ಣುಗಳಿವೆ?

 A:- ಚಿತ್ರದಲ್ಲಿ ಮೂರು ಹಣ್ಣುಗಳಿವೆ.

 

6. ಚಿತ್ರದಲ್ಲಿರುವ ಹಣ್ಣಿನ ಹೆಸರೇನು?

A:- ಚಿತ್ರದಲ್ಲಿರುವ ಹಣ್ಣಿನ ಹೆಸರು ಬಾಳೆಹಣ್ಣು.

 

 

7. ಚಿತ್ರದಲ್ಲಿರುವ ಕಾಯಿಗಳ ಹೆಸರೇನು?

A:- ಚಿತ್ರದಲ್ಲಿರುವ ಕಾಯಿಗಳ ಹೆಸರು ತೆಂಗಿನಕಾಯಿ.

 

8. ಇಲ್ಲಿ ಎಷ್ಟು ಕಾಯಿಗಳಿವೆ?

A:- ಇಲ್ಲಿ ನಾಲ್ಕು ತೆಂಗಿನಕಾಯಿ ಗಳಿವೆ.

 

9. ಚಿತ್ರದಲ್ಲಿರುವ ತರಕಾರಿಯ ಹೆಸರೇನು?

A:- ಚಿತ್ರದಲ್ಲಿರುವ ತರಕಾರಿಯ ಹೆಸರು ಬೆಂಡೆಕಾಯಿ.

 

10.ಇಲ್ಲಿ ಎಷ್ಟು ಕಾಯಿಗಳಿವೆ?

A:- ಇಲ್ಲಿ 5 ಬೆಂಡೆಕಾಯಿ ಗಳಿವೆ. 

 

Post a Comment

0 Comments