ಪಾಠ-2 ಸಹಕಾರ
I ಪದಗಳ ಅರ್ಥ ಬರೆಯಿರಿ:-
1. ಗುಬ್ಬಚ್ಚಿ = ಗುಬ್ಬಿ
2.ಸಂಗ್ರಹಿಸು = ಒಟ್ಟುಗೂಡಿಸು
3.ಬಿತ್ತು = ಬೀಜ ಹಾಕು
4.ಪೈರು=ಧಾನ್ಯದ ಬೆಳೆ
II ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:-
1. ಹಳ್ಳಿಯ ಹೆಸರೇನು?
A:- ಹಳ್ಳಿಯ ಹೆಸರು ಮಲ್ಲಿಗೆಹಳ್ಳಿ.
2.ಕೋಳಿ ಎಲ್ಲಿ ವಾಸವಾಗಿತ್ತು?
A:-ಕೋಳಿ ತೋಟದಲ್ಲಿ ವಾಸವಾಗಿತ್ತು.
3.ಕೋಳಿ ರಾಗಿಯನ್ನು ಬಿತ್ತಲು ಯಾರ ಸಹಾಯ ಕೇಳಿತ್ತು?
A:- ಕೋಳಿ ರಾಗಿಯನ್ನು ಬಿತ್ತಲು ಗುಬ್ಬಚ್ಚಿಯ ಸಹಾಯ ಕೇಳಿತ್ತು
4.ರಾಗಿಯ ಪೈರಿನಲ್ಲಿ ಏನು ಬಿಟ್ಟಿತು?
A:- ರಾಗಿಯ ಪೈರಿನಲ್ಲಿ ತೆನೆ ಬಿಟ್ಟಿತು.
5. ಕೋಳಿ ಯಾರನ್ನು ಕೂಡಿಕೊಂಡು ರಾಗಿಯ ತೆನೆಗಳನ್ನು ಕೊಯ್ದಿತ್ತು?
A:- ಕೋಳಿ ತನ್ನ ಮರಿಗಳನ್ನು ಕೂಡಿಕೊಂಡು ರಾಗಿಯ ತೆನೆಗಳನ್ನು ಕೊಯ್ದಿತ್ತು.
6. ಗುಬ್ಬಚ್ಚಿ ಮತ್ತು ಪಾರಿವಾಳಗಳಿಗೆ ಏನು ತಿಳಿಯಿತು?
A:- ಗುಬ್ಬಚ್ಚಿ ಮತ್ತು ಪಾರಿವಾಳಗಳಿಗೆ ತಮ್ಮ ತಪ್ಪು ತಿಳಿಯಿತು.
7. ಕೋಳಿಗೆ ಏನು ಅನಿಸಿತು?
A:- ಕೋಳಿಗೆ ಅಯ್ಯೋ ಪಾಪ ಎಂದು ಅನಿಸಿತು.
III ಬಿಟ್ಟಿರುವ ಪದಗಳನ್ನು ತುಂಬಿರಿ:-
1. ಕೋಳಿ ರಾಗಿಯನ್ನು ಬಿತ್ತಲು ಗುಬ್ಬಚ್ಚಿಯ ಸಹಾಯ ಕೇಳಿದ್ದು.
2. ಕೋಳಿ ತನ್ನ ಮರಿಗಳನ್ನು ಕೂಡಿಕೊಂಡು ರಾಗಿಯನ್ನು ಬಿತ್ತಿತು.
3. ಒಂದು ದಿನ ಗುಬ್ಬಚ್ಚಿ ಮತ್ತು ಪಾರಿವಾಳಗಳಿಗೆ ತುಂಬಾ ಹಸಿವಾಯಿತು.
4. ಗುಬ್ಬಚ್ಚಿ ಮತ್ತು ಪಾರಿವಾಳಗಳಿಗೆ ತಮ್ಮ ತಪ್ಪು ತಿಳಿಯಿತು.
5. ಕೋಳಿ ತನ್ನ ಮರಿಗಳನ್ನು ಕೂಡಿಕೊಂಡು ರಾಗಿ ತೆನೆಯನ್ನು ಕೊಯ್ದಿತ್ತು.
0 Comments