ಪಾಠ-4 ಹೂದೋಟ
I ಪದಗಳ ಅರ್ಥ ಬರೆಯಿರಿ:-
1.ದಿನಾಲು= ಪ್ರತಿದಿನ
2.ಜೋಕಾಲಿ= ಉಯ್ಯಾಲೆ
II ಬಿಟ್ಟಿರುವ ಸ್ಥಳ ತುಂಬಿರಿ:-
1.ಹೂದೋಟಕ್ಕೆ ಬರಲು ನನಗೆ ತುಂಬಾ ಇಷ್ಟ
2.ನಾನು ಹೋಗಿ ಸ್ವಲ್ಪಹೊತ್ತು ಜೋಕಾಲಿ ಆಡಲು ಹೋಗಲೆ
3.ನಿಮ್ಮ ನಡೆದಾಟ ಆಯಿತೆ
4.ನೀನು ತುಂಬಾ ಜಾಣೆ
III ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:-
1.ಅಜ್ಜಿ ದಿನಾಲು ಸಂಜೆ ಎಲ್ಲಿಗೆ ಹೋಗುತ್ತಿದ್ದರು?
A:- ಅಜ್ಜಿ ದಿನಾಲು ಸಂಜೆ ಹೂದೋಟಕ್ಕೆ ಹೋಗುತ್ತಿದ್ದರು.
2. ದೇಹಕ್ಕೆ ಒಳ್ಳೆಯ ವ್ಯಾಯಾಮ ಯಾವುದು?
A:- ನಡೆಯುವುದು ದೇಹಕ್ಕೆ ಒಳ್ಳೆಯ ವ್ಯಾಯಾಮ.
3. ಸುಮಾ ಯಾವ ಆಟ ಆಡಿದಳು?
A:-ಸುಮಾ ಜೋಕಾಲಿ ಆಟ ಆಡಿದಳು.
IV ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು:-
1. ಅಜ್ಜಿ ನೀವು ದಿನಾಲು ಸಂಜೆ ಹೂದೋಟಕ್ಕೆ ಬರುತ್ತೀರಿ ಅಲ್ಲವೇ.
A:-ಈ ಮಾತನ್ನು ಸುಮಾ ಅಜ್ಜಿಗೆ ಕೇಳಿದಳು
2.ನಡೆಯುವುದು ದೇಹಕ್ಕೆ ಒಳ್ಳೆಯ ವ್ಯಾಯಾಮ, ವ್ಯಾಯಾಮ ಆರೋಗ್ಯಕ್ಕೆ ಅಗತ್ಯ
A:-ಈ ಮಾತನ್ನು ಅಜ್ಜಿ ಸುಮಾಳಿಗೆ ಹೇಳಿದರು.
3.ಮಕ್ಕಳು ಚಿಕ್ಕಂದಿನಿಂದಲೂ ಇಂಥ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಒಳ್ಳೆಯದು.
A:- ಈ ಮಾತನ್ನು ಅಜ್ಜಿ ಸುಮಾಳಿಗೆ ಹೇಳಿದರು.
ಚಟುವಟಿಕೆ: ಹೂದೋಟದ ಚಿತ್ರ ರಚಿಸಿ ಬಣ ತುಂಬಿ:-
0 Comments