ಆನೆ ಬಂದಿತ್ತು
I ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ :-
1.ಆನೆ ಯಾವ ದಿನದಂದು ಮನೆಗೆ ಬಂದಿತ್ತು?
A:-ಆನೆ ಹಬ್ಬದ ದಿನದಂದು ಮನೆಗೆ ಬಂದಿತ್ತು .
2.ಯಾರ ಮನೆಗೆ ಆನೆ ಬಂದಿತ್ತು ?
A:-ಸುಬ್ಬನ ಮನೆಗೆ ಆನೆ ಬಂದಿತ್ತು.
3.ಆನೆಗೆ ಅಮ್ಮ ಏನನ್ನು ಕೊಟ್ಟಳು?
A:-ಆನೆಗೆ ಅಮ್ಮ ಬೆಲ್ಲದ ಉಂಡೆ ಕೊಟ್ಟಳು.
4. ಆನೆಯ ಕಾಲಿಗೆ ಏನನ್ನು ಕಟ್ಟಲಾಗಿತ್ತು?
A:-ಆನೆಯ ಕಾಲಿಗೆ ಗೆಜ್ಜೆಯನ್ನು ಕಟ್ಟಲಾಗಿತ್ತು.
5.ಆನೆಯು ಹೇಗೆ ಜಳಕ ಮಾಡಿತ್ತು?
A:-ಆನೆಯು ನೀರಿಗೆ ಇಳಿದು ಸೊಂಡಿಲು ಬಡಿದು ಜಳಕ ಮಾಡಿತ್ತು.
6.ಆನೆಯು ಹೇಗೆ ಸಲಾಮು ಮಾಡಿತ್ತು?
A:-ಆನೆಯು ಕೆಳಕ್ಕೆ ಬಗ್ಗಿ ಸೊಂಡಿಲೆತ್ತಿ ಸಲಾಮು ಮಾಡಿತ್ತು.
7.ಆನೆಯು ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೊರಟಿತ್ತು?
A:- ಆನೆಯು ಮಕ್ಕಳನ್ನು ಕರೆದುಕೊಂಡು ಸವಾರಿ ಹೊರಟಿತ್ತು.
0 Comments