ಸಂತೆ
I ನಿಮಗೆ ತಿಳಿದಿರುವ ಹೂವುಗಳ ಹೆಸರುಗಳನ್ನು ಪಟ್ಟಿಮಾಡಿ:-
1. ಗುಲಾಬಿ ಹೂ 2.ಚೆಂಡುಹೂ
3.ದಾಸವಾಳ 4.ಮಲ್ಲಿಗೆ 5.ಸಂಪಿಗೆ
IIಮನೆಯಲ್ಲಿ ಬಳಸುವ ಕೆಲವು ವಸ್ತುಗಳ ಹೆಸರುಗಳನ್ನು ಬರೆಯಿರಿ:-
1.ಮೆಣಸಿನಕಾಯಿ 2.ಈರುಳ್ಳಿ 3.ಜೋಳ
4.ಕಡಲೆ 5.ರಾಗಿ 6.ಬೆಳ್ಳುಳ್ಳಿ
7.ತೊಗರಿಕಾಳು 8.ಅಕ್ಕಿ 9.ಗೋಧಿ
III ಪದಗಳ ಅರ್ಥ ಬರೆಯಿರಿ:-
1.ಖುಷಿ= ಹಿಗ್ಗು
2.ಪದಾರ್ಥ =ವಸ್ತು
3.ರಾಶಿ =ಗುಂಪು
4.ರಿಪೇರಿ =ಸರಿಪಡಿಸುವಿಕೆ
5.ಸಲಕರಣೆ =ಉಪಕರಣ
6.ದಿನಸಿ= ಧಾನ್ಯ
7.ಬದಿ =ಪಕ್ಕ
IV ಒಂದು ಪದದಲ್ಲಿ ಉತ್ತರಿಸಿ:-
1.ಮಸಾಲೆಯ ಪದಾರ್ಥ= ಸಾಂಬಾರ
2.ಕೊಳ್ಳುವುದು ಮತ್ತು ಮಾರುವುದು ==ವ್ಯಾಪಾರ
3.ಮನಸ್ಸನ್ನು ಸಂತೋಷಪಡಿಸುವುದು ==ಮನೋರಂಜನೆ
4.ನೆಲವನ್ನು ಅಗೆಯಲು ಉಪಯೋಗಿಸುವ ಮರದ ಹಿಡಿಯುಳ್ಳ ಕಬ್ಬಿಣದ ಸಾಧನ== ಗುದ್ದಲಿ
V ಮಾದರಿಯಂತೆ ಬರೆಯಿರಿ:-
1.ಚಿಕ್ಕಪ್ಪ--ಚಿಕ್ಕಮ್ಮ
2.ಅಪ್ಪ--ಅಮ್ಮ
3.ದೊಡ್ಡಪ್ಪ--ದೊಡ್ಡಮ್ಮ
4.ಮಾವ --ಅತ್ತೆ
VI ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1.ಗೆಳೆಯರೆಲ್ಲಾ ಕೂಡಿ ಎಲ್ಲಿಗೆ ಹೋದರು?
A:-ಗೆಳೆಯರೆಲ್ಲಾ ಕೂಡಿ ಸಂತೆಗೆ ಹೋದರು.
2.ಸಂತೆಯಲ್ಲಿ ಏನನ್ನು ರಿಪೇರಿ ಮಾಡುತ್ತಿದ್ದರು?
A:-ಸಂತೆಯಲ್ಲಿ ಹಾಳಾಗಿರುವ ಬೀಗ ಮತ್ತು ಕೊಡುಗೆಯನ್ನು ರಿಪೇರಿ ಮಾಡುತ್ತಿದ್ದರು.
3.ಸಂತೆಯಲ್ಲಿ ಯಾವ ಆಟ ಆಡುತ್ತಿದ್ದರು ?
A:-ಸಂತೆಯಲ್ಲಿ ಹಗಲುವೇಷ ಆಟ ಆಡುತ್ತಿದ್ದರು.
4.ಮಕ್ಕಳು ಬಾಳೆಹಣ್ಣಿನ ಸಿಪ್ಪೆಯನ್ನು ಎಲ್ಲಿ ಹಾಕಿದರು?
A:-ಮಕ್ಕಳು ಬಾಳೆಹಣ್ಣಿನ ಸಿಪ್ಪೆಯನ್ನು ಕಸದತೊಟ್ಟಿಯಲ್ಲಿ ಹಾಕಿದರು.
VII ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು:-
1.”ಅವಸರದಿಂದ ಚದುರು ಹೋಗಬೇಡಿ”
A:-ಈ ಮಾತನ್ನು ಅನಿತಾಳ ಚಿಕ್ಕಪ್ಪ ಮಕ್ಕಳಿಗೆ ಹೇಳಿದರು.
2.”ಅಲ್ಲಿ ನೋಡಿ ಗಮಗಮಿಸುವ ಹೂಗಳು”
A:-ಈ ಮಾತನ್ನು ಅನಿತಾ ಹೇಳಿದಳು ಚಿಕ್ಕಪ್ಪನಿಗೆ ಹೇಳಿದಳು .
3.ಇಲ್ಲಿಗೆ ಇವೆಲ್ಲವನ್ನೂ ಎಲ್ಲಿಂದ ತರುತ್ತಾರೆ”
A:-ಈ ಮಾತನ್ನು ಜಾನ್ ಚಿಕ್ಕಪ್ಪನಿಗೆ ಹೇಳಿದನು.
4.”ಸಿಪ್ಪೆಯನ್ನು ದಾರಿಗೆ ಎಸೆಯಬಾರದು “
A:-ಈ ಮಾತನ್ನು ರಶೀದ್ ಹೇಳಿದನು.
0 Comments