ಪಾಠ-- 5 ಚಿಗುರು
I ಪದಗಳ ಅರ್ಥ ಬರೆಯಿರಿ:-
1.ಲೇಖನ ==ಬರವಣಿಗೆ.
2.ಪರಿಶೀಲಿಸು ==ಸೂಕ್ಷ್ಮವಾಗಿ ಗಮನಿಸು.
3.ಉತ್ತಮ ==ಶ್ರೇಷ್ಠ.
4.ಪ್ರಕಟಿಸು==ಗ್ರಂಥ ಲೇಖನ ಮುಂತಾದುವನ್ನು ಪ್ರಕಾಶನಕ್ಕೆ ತರು.
5.ಕುತೂಹಲ== ಅಚ್ಚರಿ .
6.ಸರಾಗವಾಗಿ ==ಸುಲಭವಾಗಿ.
7.ಚರ್ಚೆ== ಪರ್ಯಾಲೋಚನೆ.
8.ಸಲಹೆ-=ಸೂಚನೆ.
9.ಸುಭಾಷಿತ== ಒಳ್ಳೆಯ ಮಾತು.
II ಒಂದು ಪದದಲ್ಲಿ ಉತ್ತರಿಸಿ:-
1.ಸುದ್ದಿಯನ್ನು ಪರಿಷ್ಕರಿಸಿ ಪ್ರಕಟಿಸುವ ತಂಡ== ಸಂಪಾದಕ ಮಂಡಳಿ
2.ಶಾಲೆಯಿಂದ ಹೊರತರುವ ಪತ್ರಿಕೆ== ಶಾಲಾ ಪತ್ರಿಕೆ
3.ತಾನೇ ರಚಿಸಿದ ಸ್ವರಚಿತ ನಗುವನ್ನು ಉಂಟುಮಾಡುವ ಚುಟುಕ್ಕಾ ದ ಮಾತು ಅಥವಾ ಬರೆಹ== ನಗೆಹನಿ
4.ಅಣಕ ದಿಂದ ಕೂಡಿದ ಚಿಕ್ಕ ಪದ್ಯ ==ಚುಟುಕು
5.ಬರೆಯುವುದಕ್ಕಾಗಿ ಕಪ್ಪು ಬಣ್ಣ ಹಚ್ಚಿರುವ ಗೋಡೆಯ ಭಾಗ ಅಥವಾ ಹಲಗೆ =ಕಪ್ಪುಹಲಗೆ
III ಹೊಂದಿಸಿ ಬರೆಯಿರಿ
1.ಲೇಖಕರ ಹೆಸರು ಲೇಖನದ ಹೆಸರು.
2. ಮಾಲಾ ನಿಮಗಿದು ತಿಳಿದಿರಲಿ.
3.ಥಾಮಸ್ ನಾಡ ಹಬ್ಬ .
4.ಬೇಗಂ ಗಾದೆಮಾತು .
5.ವಿನಾಯಕ ಸ್ವಾಮಿ ವಿವೇಕಾನಂದ.
IV ಗಾದೆ ಮಾತುಗಳನ್ನು ಪೂರ್ಣಗೊಳಿಸಿ:-
1.ಆಪತ್ತಿಗಾದವನೇ ನೆಂಟ.
2.ಅತಿಯಾಸೆ ಗತಿಗೇಡು.
3.ಮಾತು ಬೆಳ್ಳಿ ಮೌನ ಬಂಗಾರ .
4.ಆಳಾಗಿ ದುಡಿ ಅರಸಾಗಿ ಉಣ್ಣು.
5.ಮಾಡಿದ್ದುಣ್ಣೋ ಮಾರಾಯ.
6.ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುತ್ತದೆ.
7.ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು .
8.ಶಕ್ತಿಗಿಂತ ಯುಕ್ತಿ ಮೇಲು.
9. ಗಾದೆಯೆಂದರೆ ನಾಣ್ಣುಡಿ.
V ಸರಿ-ತಪ್ಪು ಗುರುತಿಸಿ:-
1.ತಪ್ಪಿಲ್ಲದೆ ಚೆನ್ನಾಗಿ ಕಾಣುವ ರೀತಿಯಲ್ಲಿ ಬರೆಯಬೇಕು ---ಸರಿ
2.ಸುಲಭವಾಗಿ ಓದಲು ಮತ್ತು ಓದಿದ್ದುಅರ್ಥವಾಗುವಂತೆ ಬರೆಯಬೇಕು-- ಸರಿ
3.ಪದಗಳಲ್ಲಿನ ಅಕ್ಷರಗಳನ್ನು ಒಂದೇ ಗಾತ್ರದಲ್ಲಿ ಬರೆಯಬಾರದು --ತಪ್ಪು
4.ಪದದಲ್ಲಿನ ಅಕ್ಷರಗಳು ಒಂದಕ್ಕೊಂದು ತಾಕದಂತೆ ಹಾಗೂ ನಡುವೆ ಸ್ಥಳ ಬಿಡದಂತೆ ಬರೆಯಬೇಕು--- ತಪ್ಪು
5.ಪದಗಳ ನಡುವೆ ಸ್ಥಳವನ್ನು ಬಿಡದೇ ಬರೆಯಬೇಕು --ತಪ್ಪು
6.ಅಕ್ಷರ ಹಾಗೂ ಸಾಲುಗಳು ಓರೆಯಾಗಿ ಇರಬಾರದು ---ಸರಿ
V ಈ ಪದಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿ ವಾಕ್ಯ ತಯಾರಿಸಿ:-
1.ನಾಡ ನಮ್ಮ ಹಬ್ಬ ದಸರಾ.
A:-ನಮ್ಮ ನಾಡ ಹಬ್ಬ ದಸರಾ.
2.ಮಾತು ಜಗಳವಿಲ್ಲ ಬಲ್ಲವನಿಗೆ .
A:-ಮಾತು ಬಲ್ಲವನಿಗೆ ಜಗಳವಿಲ್ಲ.
3.ರಾಜ್ಯ ನಮ್ಮ ಕರ್ನಾಟಕ.
A:-ನಮ್ಮ ರಾಜ್ಯ ಕರ್ನಾಟಕ .
4.ಹಣ್ಣುಗಳ ಮಾವು ರಾಜ.
A:-ಹಣ್ಣುಗಳ ರಾಜ ಮಾವು.
VI ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:-
1.ಶಾಲಾ ಪತ್ರಿಕೆಯ ಹೆಸರೇನು?
A:-.ಶಾಲಾ ಪತ್ರಿಕೆಯ ಹೆಸರು ಚಿಗುರು.
2.:-ನಮ್ಮ ನಾಡ ಹಬ್ಬ ಯಾವುದು?
A.ನಮ್ಮ ನಾಡ ಹಬ್ಬ ದಸರಾ.
3.:-ಹಣ್ಣುಗಳ ರಾಜ ಯಾರು?
A.ಹಣ್ಣುಗಳ ರಾಜ ಮಾವು.
4.ವಿವೇಕಾನಂದರ ಬಾಲ್ಯದ ಹೆಸರೇನು?
A:- ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರ ದತ್ತ.
5.ಜೋಗ್ ಜಲಪಾತ ಎಲ್ಲಿದೆ?
A:-ಜೋಗ್ ಜಲಪಾತ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಹಳ್ಳಿಯಲ್ಲಿ ಇದೆ.
6.ಈ ಪತ್ರಿಕೆಯಲ್ಲಿ ಸತೀಶ ಬರೆದಿರುವ ಲೇಖನದ ಹೆಸರೇನು?
A:-ಈ ಪತ್ರಿಕೆಯಲ್ಲಿ ಸತೀಶ ಬರೆದಿರುವ ಲೇಖನದ ಹೆಸರು ಜಲಪಾತ.
7.ಚಿಗುರು ಪತ್ರಿಕೆಯಲ್ಲಿ ನಿನಗೆ ಇಷ್ಟವಾದ ಬರೆಹ ಯಾವುದು?
A:-ಚಿಗುರು ಪತ್ರಿಕೆಯಲ್ಲಿ ನನಗೆ ಇಷ್ಟವಾದ ಬರಹ ಗಾದೆ.
VIIಚಟುವಟಿಕೆ:-
ಚುಕ್ಕಿ ಚಿನ್ನ ಶಾಲಾ ಪತ್ರಿಕೆಗೆ ಮೂರು ಸಾಲುಗಳ ಒಂದು ಲೇಖನವನ್ನು ಶುದ್ಧ ಬರಹದಲ್ಲಿ ಬರೆಯಿರಿ
0 Comments