3rd standard Kannada ( Esoora swagatha)

 

ಪಾಠ--6 ಈಸೂರು ಸ್ವಗತ

Iಪದಗಳ ಅರ್ಥ ಬರೆಯಿರಿ:-

1.ಏಸೂರು ==ಎಷ್ಟು ಊರು                  2.ದಂಡೆ == ದಡ

3.ಚಳುವಳಿ ==ಹೋರಾಟ                     4.ಪ್ರೇರಿತ ==ಪ್ರಚೋದಿತ

5.ತೆರಿಗೆ ==ಕರ                                      6.ಧಿಕ್ಕರಿಸು ==ತಿರಸ್ಕರಿಸು

7.ಪ್ರತಿಭಟನೆ== ವಿರೋಧ                    8.ನಿರಾಯುಧ ==ಆಯುಧ ವಿಲ್ಲದೆ

9.ಲಾಟಿ== ಬಿದುರಿನ ಕೋಲು              10.ಕೋಪಗೊಂಡ ==ರೊಚ್ಚಿಗೆದ್ದ

11.ಘೋಷಣೆ ==ಗಟ್ಟಿಯಾಗಿ ಕೂಗು        12.ಲೂಟಿ ==ದೋಚು

13.ಧೃತಿಗೆಡುವ== ಧೈರ್ಯಗುಂದು       14.ಫಲಕ ==ಬರಹದ ಹಲಗೆ

15.ಆದೇಶ ==ಆಜ್ಞೆ                            16.ದಂಡ== ಜುಲ್ಮಾನೆ

17.ಹರಸು ==ಆಶೀರ್ವದಿಸು                  18.ಕಲಿಗಳು ==ವೀರರು

19.ಅಗಸೆ ==ಊರ ಮುಂದಿನ ಹೆಬ್ಬಾಗಿಲು 20. ತೊಲಗು ==ಹೋಗು

 

II  ಒಂದು ಪದದಲ್ಲಿ ಉತ್ತರಿಸಿ:-

1.ದೇಶ ಸ್ವತಂತ್ರವಾಗುವ ದಕ್ಕೆ ಮುನ್ನ ==ಸ್ವಾತಂತ್ರ್ಯಪೂರ್ವ

2.ಪರಕೀಯರ ಆಡಳಿತದಿಂದ ಬಿಡುಗಡೆ ಹೊಂದಿದ ಗ್ರಾಮ ==ಸ್ವತಂತ್ರ ಹಳ್ಳಿ

3.ಮನೆ ಭೂಮಾಲಿಕರ ವಿವರವಿರುವ ಕಂದಾಯ ದಾಖಲೆ ಪುಸ್ತಕ =ಖಾತೆ ಕಿರ್ದಿ ಒಳಿತಿಗಾಗಿ ಮಾಡುವ ಜೀವದಾನ ಬಲಿದಾನ

4.ಮನೆ ಭೂಮಿ ವ್ಯಾಪಾರ ವೃತ್ತಿ ಇತ್ಯಾದಿ ಗಳಿಕೆಯ ಮೇಲೆ ಸರ್ಕಾರ ವಿಧಿಸುವ ತೆರಿಗೆ ==ಕಂದಾಯ

5.ಆಪಾದನೆಯನ್ನು ಆದರಿಸಿ ಆಪಾದಿತ ಮೇಲೆ ಆರೋಪ ಪಟ್ಟಿ ಸಿದ್ಧತೆ =ಮೊಕ್ಕದ್ದಮೆ

6.ತಾಲೂಕಿನ ಭೂಕಂದಾಯ ಮುಂತಾದ ತೆರಿಗೆ ವಸೂಲು ಮಾಡಲು ಗೊತ್ತುಪಡಿಸಿರುವ ಅಧಿಕಾರಿ ==ಅಮಲ್ದಾರ್

7.ಸಂಕೋಚವಿಲ್ಲದೆ ನೇರವಾಗಿ ಹೇಳುವುದು =ಮುಕ್ತಕಂಠ

8.ತನಗೆ ತಾನೆ ಹೇಳಿಕೊಳ್ಳುವುದು =ಸ್ವಗತ

 

III ವಿರುದ್ಧ ಪದ ಬರೆಯಿರಿ:-

1.ಆರಂಭಮುಕ್ತಾಯ.

2.ಪ್ರವೇಶನಿರ್ಗಮನ.

3.ಸೋಲು--ಗೆಲುವು .

4.ವೀರ --ಹೇ ಡಿ.

 

IV ಬಹುವಚನ ಪದಗಳನ್ನು ಬರೆಯಿರಿ:-

1.ಗಾಡಿ -----ಗಾಡಿ ಗಳು

2.ಕುದುರೆ ---ಕುದುರೆ ಗಳು

3.ಗಿಳಿ ------ಗಿಳಿ ಗಳು

4.ಅಣ್ಣ----ಅಣ್ಣಂದಿರು

5.ಅಜ್ಜ ----ಅಜ್ಜಂದಿರು

6.ತಮ್ಮ ---ತಮ್ಮಂದಿರು

7.ಮಾವ--- ಮಾವಂದಿರು

8.ಚಿಕ್ಕಮ್ಮ -ಚಿಕ್ಕಮ್ಮಂದಿರು

9.ಚಿಕ್ಕಪ್ಪಂದಿರು -ಚಿಕ್ಕಪ್ಪಂದಿರು

10.ಮನೆ ----ಮನೆಗಳು

 

V ಬಿಟ್ಟ ಸ್ಥಳವನ್ನು ತುಂಬಿರಿ:-

1.ಒಂದು ಎಂಬ ಅರ್ಥ ಕೊಡುವ ಪದಗಳು ಏಕವಚನ.

2. ಒಂದಕ್ಕಿಂತ ಹೆಚ್ಚು ಎಂಬ ಅರ್ಥ ಕೊಡುವ ಪದಗಳು ಬಹುವಚನ.

3.ನುಡಿಗಟ್ಟು ಎಂದರೆ ವಿಶಿಷ್ಟವಾದ ಮಾತಿನ ಜೋಡಣೆ.

4.ರಾಜು ಕೆಲಸ ಮಾಡುವುದರಲ್ಲಿ ಎತ್ತಿದ ಕೈ.

5.ಅವರು ಮಾತನಾಡುವಾಗ ನಾನು ಅನವಶ್ಯಕವಾಗಿ ತಲೆ ಹಾಕುವುದಿಲ್ಲ.

6.ಕೆಲವರು ತಮಗೆ ಗೊತ್ತಿಲ್ಲದಿದ್ದರೂ ಸುಮ್ಮನೆ ರೈಲು ಬಿಡುತ್ತಾರೆ

7.ಅಮ್ಮ ಕೆಲಸ ಹೇಳಿದರೆ ನನ್ನ ತಮ್ಮ ಹೊರಡುತ್ತಾನೆ

8. ಅಧಿಕಾರಿಗಳು ಕಂದಾಯ ವಸೂಲಿಗೆ  ಖಾತೆ ಕಿರ್ದಿ ಪುಸ್ತಕಗಳೊಂದಿಗೆ ಬಂದರು .

9.ದೇವಸ್ಥಾನದ ಮುಂದೆ ಗುಪ್ತ ಸಭೆ ನಡೆಸಿದರು.

10.ಅವರಿಗೆ ಐವತ್ತು ರೂಪಾಯಿ ದಂಡ ವಿಧಿಸಲಾಯಿತು

 

VI ಸರಿ-ತಪ್ಪು ಗುರುತಿಸಿ:-

 1.ಪಟೇಲ್ ಚನ್ನಬಸವಯ್ಯ ಮತ್ತು ಶಾನುಭೋಗ ರಂಗನಾಥರಾವ್ ಸ್ವತಂತ್ರ ಸರಕಾರದ ಅಧಿಕಾರಿಗಳು --ತಪ್ಪು

2.ಬ್ರಿಟಿಷ್ ಅಧಿಕಾರಿಗಳು ಗ್ರಾಮ ಪ್ರವೇಶಿಸಿದಂತೆ ಜನರು ಪ್ರತಿಭಟಿಸಿದರು-- ಸರಿ

3.ಈಸೂರಿನ ಸ್ವತಂತ್ರ ಸರ್ಕಾರದ ರಚನೆಯನ್ನು ತಿಳಿದ ಬ್ರಿಟಿಷ್ ಅಧಿಕಾರಿಗಳು ಸಂತಸಗೊಂಡರು-- ತಪ್ಪು

 

VII ವಾಕ್ಯಗಳನ್ನು ಸರಿಯಾದ ಕ್ರಮದಲ್ಲಿ ಬರೆಯಿರಿ:-

1.ಅಳುತ್ತಿದ್ದರು ಇಂದೇ ಬ್ರಿಟಿಷರು ಭಾರತವನ್ನು.

 A:-ಹಿಂದೆ ಬ್ರಿಟಿಷರು ಭಾರತವನ್ನು ಅಳುತ್ತಿದ್ದರು.

 

2.ಸ್ವಾತಂತ್ರ ಈಸೂರಿನವರು ಪ್ರೇಮಿಗಳು.

A:- ಈಸೂರಿನವರು ಸ್ವಾತಂತ್ರ್ಯ ಪ್ರೇಮಿಗಳು.

 

VIII ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:-

1.ಈಸೂರು ಯಾವ ಜಿಲ್ಲೆಯಲ್ಲಿದೆ?

A:-ಈಸೂರು ಶಿವಮೊಗ್ಗ ಜಿಲ್ಲೆಯಲ್ಲಿದೆ.

 

2.ಗಾಂಧೀಜಿಯವರು ಆರಂಭಿಸಿದ ಚಳುವಳಿ ಯಾವುದು?

A:-ಗಾಂಧೀಜಿಯವರು ಆರಂಭಿಸಿದ ಚಳುವಳಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ.

 

3.ಈಸೂರಿನ ಜನತೆ ಯಾರ ಅಧಿಕಾರವನ್ನು ಧಿಕ್ಕರಿಸಿದರು?

 A:-ಈಸೂರಿನ ಜನತೆ ಬ್ರಿಟಿಷರ ಸರ್ಕಾರದ ಅಧಿಕಾರವನ್ನು ಧಿಕ್ಕರಿಸಿದರು.

 

4.ಈಸೂರಿನ ಜನತೆ ತಮ್ಮ ಹಳ್ಳಿಯನ್ನು ಏನೆಂದು ಘೋಷಿಸಿದರು ?

A:-ಈಸೂರಿನ ಜನತೆ ತಮ್ಮ ಹಳ್ಳಿಯನ್ನು ಸ್ವತಂತ್ರ ಹಳ್ಳಿ ಎಂದು ಘೋಷಿಸಿದರು.

 

5.ಸ್ಥಳೀಯ ಸರ್ಕಾರದ ಅಮಲ್ದಾರ ಮತ್ತು ಪೊಲೀಸ್ ಅಧಿಕಾರಿಯ ಹೆಸರೇನು? A:-ಸ್ಥಳೀಯ ಸರ್ಕಾರದ ಅಮಲ್ದಾರರು ಸಾಹುಕಾರ ಜಯಣ್ಣ ಹಾಗೂ ಪೊಲೀಸ್ ಅಧಿಕಾರಿ ಮಲ್ಲಪ್ಪ ಯ್ಯ .

 

6.ಅಗಸೆ ಬಾಗಿಲಿನಲ್ಲಿ ಹಾಕಿದ್ದ ಫಲಕದಲ್ಲಿ ಏನೆಂದು ಬರೆದಿತ್ತು? 

A:-ಅಗಸೆ ಬಾಗಿಲಿನಲ್ಲಿ ಹಾಕಿದ್ದ ಫಲಕದಲ್ಲಿ ಬೇಜವಾಬ್ದಾರಿ ಸರ್ಕಾರಿ ಅಧಿಕಾರಿಗಳಿಗೆ ಈಸೂರಿನಲ್ಲಿ ಪ್ರವೇಶವಿಲ್ಲ ಎಂದು ಬರೆದಿತ್ತು.

 

7.ಹೊಸಸರ್ಕಾರದ ಅಧಿಕಾರಿಗಳು ಬ್ರಿಟಿಷ್ ಅಧಿಕಾರಿಗಳಿಗೆ ನೀಡಿದ ಆಜ್ಞೆಏನು ?

A:-ಹೊಸ ಸರ್ಕಾರದ ಅಧಿಕಾರಿಗಳು ಬ್ರಿಟಿಷ್ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ರಾಜೀನಾಮೆ ಕೊಟ್ಟು ಗಾಂಧಿಟೋಪಿ ಹಾಕಿಕೊಂಡು ಈಸೂರು ಸರ್ಕಾರದಲ್ಲಿ ಕೆಲಸ ಮಾಡಬೇಕೆಂದು ಅವರಿಗೆ ಮಾಡಿದರು.

 

8.ಸ್ವಗತ ಎಂದರೇನು?

A:-ಸ್ವಗತ ಎಂದರೆ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವುದು.

 

IXಕಾರಣ ಕೊಡಿರಿ:-

1.ಈಸೂರು ಶಿವಮೊಗ್ಗ ಜಿಲ್ಲೆಗೆ ಹೆಸರು ತಂದಿತು.

A:-ಈಸೂರು ಜನರ ಸ್ವಾತಂತ್ರ್ಯ ಪ್ರೇಮ ಹಾಗೂ ಮಕ್ಕಳ ಧೈರ್ಯವೂ ಕನ್ನಡಿಗರ ಮನೆಮಾತಾದ ರಿಂದ ಈಸೂರು ಶಿವಮೊಗ್ಗ ಜಿಲ್ಲೆಗೆ ಹೆಸರನ್ನು ತಂದಿತ್ತು. 

 

2.ಅರೇಬಿಕ್ ಪದಗಳನ್ನು ಬರೆಯಿರಿ:-

A:-ಖಾತೆ   ಕಿರ್ದಿ        ಅಮಲ್ದಾರ        ಮೊಕ್ಕದ್ದಮೆ     ಕಚೇರಿ      ಕುರ್ಚಿ

 

3.ಇಂಗ್ಲಿಷ್ ಪದಗಳನ್ನು ಬರೆಯಿರಿ :-

A:-ಸ್ಕೂಟರ್      ಬಕೆಟ್      ನಿಕ್ಕರ್      ಬ್ಯಾಂಕ್

 

4.ಹಿಂದೂಸ್ತಾನಿ ಪದಗಳನ್ನು ಬರೆಯಿರಿ:-

A:-ಟೋಪಿ        ಗಡಿಯಾರ         ಗಿರಾಕಿ       ಗಾಬರಿ

 

 

Xನುಡಿಗಟ್ಟುಗಳನ್ನು ಬರೆದು ಅರ್ಥ ತಿಳಿಯಿರಿ:-

1.ಎತ್ತಿದ ಕೈ ==ಪ್ರವೀಣ.

2.ಕಬ್ಬಿಣದಕಡಲೆ ==ಕಠಿಣವಾದ ವಿಷಯ.

3.ತಲೆ ಹಾಕೋ ==ಮಧ್ಯಪ್ರವೇಶಿಸಿ.

4.ಎಳ್ಳಷ್ಟು ==ಅತ್ಯಲ್ಪ.

5.ರೈಲು ಬಿಡು== ಸುಳ್ಳು ಹೇಳು .

6.ಕಾಲು ತೆಗೆ== ಹೊರಡು.

 

 

 

Post a Comment

0 Comments