ಪಾಠ--4 ಕಂದ
I ಪದಗಳ ಅರ್ಥ ಬರೆಯಿರಿ:-
1.ಕುಡಿ== ಚಿಗುರು.
2.ಅಲಗು ==ಕತ್ತಿಯ ಅಂಚು.
3.ಹೂವಿನ ದಳ ==ಎಸಳು.
4.ಕಿರಿಕಿರಿ== ಕಾಟ .
5.ಬಂಗಾರ ==ಚಿನ್ನ.
6.ಸಂಜೆಯ =ಸಂಜೀಯ.
II ಒಂದು ಪದದಲ್ಲಿ ಉತ್ತರಿಸಿ:-
1.ಗಾಳಿ ಬೀಸಿ ಕೊಳ್ಳಲು ಬಳಸುವ ಸಾಧನ= ಬೀಸಣಿಕೆ .
2.ಒಂದು ಜಾತಿಯ ಕೆಂಪು ಮಣಿ ನವರತ್ನಗಳಲ್ಲಿ ಒಂದು ,ಪುಷ್ಪರಾಗ ,ನೀಲ ,ಗೋಮೇದಿಕ ,ವೈಡೂರ್ಯ, ಮುತ್ತು ==ಹವಳ
III . ಈ ಪದಗಳನ್ನು ಗ್ರಾಂಥಿಕ ರೂಪದಲ್ಲಿ ಬರೆಯಿರಿ :-
1..ಹೊಳೆದ್ಹ೦ಗ= ಹೊಳೆದ ಹಾಗೆ .
2..ಕುಡಿಹಂಗ= ಕುಡಿಯ ಹಾಗೆ.
3.ಎಸಳ್ಹಂಗ = ಎಸಳ ಹಾಗೆ.
4.ನೆನೆದ್ಹಂಗ = ನೆನೆದ ಹಾಗೆ.
5.ಬಂದ್ಹಂಗ =ಬಂದಹಾಗೆ.
6.ಕುಳಿತ್ಹಂಗ =ಕುಳಿತ ಹಾಗೆ.
IV ಸಮಾನಾರ್ಥಕ ಪದಗಳನ್ನು ಬರೆಯಿರಿ:-
1.ಬಂಗಾರ =ಚಿನ್ನ
2.ಕೂಸು= ಮಗು =ಕಂದ
3.ತಾಯಿ= ಅಮ್ಮ
V ತಪ್ಪುಗಳನ್ನು ಸರಿಪಡಿಸಿ ಬರೆಯಿರಿ:-
1.ಬೀಸಣಿಗೆ ಗಾಳಿ ಸುಳಿದಾವ.
A:-ಬೀಸಣಿಕೆ ಗಾಳಿ ಸುಳಿದಾವ.
2.ಕುಡಿಹುಬ್ಬು ಬೇವಿನೆಸಳಂಗ .
A:-ಕುಡಿಹುಬ್ಬು ಬೇವಿನೆಸಳ್ಹಂಗ.
3.ಚಂದಮನ ತಂದು ನಿಲ್ಲಿಸಿದ.
A:-ಚಂದ್ರಮನ ತಂದು ನಿಲ್ಲಿಸಿದ.
VI ಬಿಟ್ಟ ಸ್ಥಳವನ್ನು ತುಂಬಿರಿ:-
1.ಅಳುವ ಕಂದನ ತುಟಿಯು ಹವಳದ ಕುಡಿಹಂಗ.
2.ಆಡಿ ಬಾ ನನ ಕಂದ ಅಂಗಾಲ ತೊಳೆದೇನು.
3.ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ.
4.ಕಂದನ ಕಿರಿಕಿರಿ ಇಂದೇನು ಹೇಳಲಿ.
VII ಒಂದು ಪದದಲ್ಲಿ ಉತ್ತರ ಬರೆಯಿರಿ :-
1.ತಾಯಿಯೂ ಕಂದನ ಅಂಗಾಲನ್ನು ಯಾವುದರಿಂದ ತೊಳೆಯುವುದಾಗಿ ಹೇಳುತ್ತಾಳೆ?
A:-ತಾಯಿಯು ಕಂದನ ಅಂಗಾಲನ್ನು ಎಳನೀರಿಂದ ತೊಳೆಯುವುದಾಗಿ ಹೇಳುತ್ತಾಳೆ.
2.ಅಳುವ ಕಂದನ ತುಟಿಯನ್ನು ಯಾವುದಕ್ಕೆ ಹೋಲಿಸಲಾಗಿದೆ?
A:-ಅಳುವ ಕಂದನ ತುಟಿಯನ್ನು ಹವಳದ ಕುಡಿಗೆ ಹೋಲಿಸಲಾಗಿದೆ.
3.ಅಳುವ ಕಂದನ ಕಣ್ಣೋಟ ಹೇಗಿರುತ್ತದೆ?
A:-ಅಳುವ ಕಂದನ ಕಣ್ಣೋಟ ಶಿವನ ಕೈಯಲಗು ಹೊಳೆದ ಹಾಗೆ ಇರುತ್ತದೆ.
4.ಮಗು ಏನನ್ನು ತಂದು ನಿಲ್ಲಿಸಿ ಎಂದು ಹೇಳುತ್ತದೆ?
A:- ಮಗು ಚಂದ್ರಮನನ್ನು ತಂದು ನಿಲ್ಲಿಸೆಂದು ಕೇಳುತ್ತದೆ.
5.ಕೂಸು ಇದ್ದ ಮನೆಗೆ ಬೀಸಣಿಗೆ ಬೇಡ ಏಕೆ?
A:-ಕೂಸು ಮನೆಯ ಒಳಗೆ ಮತ್ತು ಹೊರಗೆ ಆಡುವಾಗ ಬೀಸಣಿಕೆ ಗಾಳಿಯು ಸುಳಿಯುತ್ತದೆ ಅದರಿಂದ ಕೂಸು ಇದ್ದ ಮನೆಗೆ ಬೀಸಣಿಕೆ ಬೇಡವೆಂದು ಕವಿ ಹೇಳುತ್ತಾರೆ.
6.ಆಡಿ ಬರುವ ಕಂದನನ್ನು ತಾಯಿ ಹೇಗೆ ಉಪಚರಿಸುತ್ತಾಳೆ?
A:-ಆಡಿ ಬರುವ ಕಂದನ ಅಂಗಾಲು ಮತ್ತು ಬಂಗಾರದ ಮಾರಿಯನ್ನು ತೆಂಗಿನಕಾಯಿಯ ತಿಳಿನೀರಿನಿಂದ ತೊಳೆಯುತ್ತೇನೆ ಎಂದು ತಾಯಿ ಹೇಳುತ್ತಾಳೆ.
0 Comments