ನನ್ನ ಕನಸು
I ಪದಗಳ ಅರ್ಥ ಬರೆಯಿರಿ:-
1.ಚಿತ್ತಾರ= ಚಿತ್ರ.
2.ನಿನಾದ =ಧ್ವನಿ .
3.ನಿಮಿರು =ನೆಟ್ಟಗೆ ನಿಲ್ಲು.
4.ಕಲರವ =ಪಕ್ಷಿಗಳ ಕೂಗು.
5.ಸಂರಕ್ಷಿಸು =ಕಾಪಾಡು.
6.ಮೂದಲಿಸು= ಹಂಗಿಸು.
IIಒಂದು ಪದದಲ್ಲಿ ಉತ್ತರಿಸಿ:-
1. ರಸ್ತೆಯ ಬದಿಯಲ್ಲಿ ಸಾಲುಸಾಲಾಗಿ ನೂರಾರು ಸಸಿಗಳನ್ನು ನೆಟ್ಟು ಪೋಷಿಸಿ ಮರಗಳನ್ನು ಬೆಳೆಸಿದ ಮಹಿಳೆ ==ಸಾಲುಮರದ ತಿಮ್ಮಕ್ಕ.
2.ಜನ ಗುಳೆ ಹೋಗುವುದು== ವಲಸೆ.
3.ಮಿತಿಮೀರಿದ ಮಳೆ ==ಅತಿವೃಷ್ಠಿ.
4. ಮಳೆ ಬಾರದಿರುವುದು = ಅನಾವೃಷ್ಟಿ.
III ಹೊಂದಿಸಿ ಬರೆಯಿರಿ:-
1. ಕೋಗಿಲೆ ಇಂಪಾದ ಧ್ವನಿ.
2.ಜಿಂಕೆ ಆಕರ್ಷಕ ನಡಿಗೆ.
3. ನವಿಲು ಆಕರ್ಷಕ ನಡಿಗೆ.
4. ಜಿಂಕೆ ಸುಂದರವಾದ ಕಣ್ಣು.
IV ವಿರುದ್ಧ ಪದಗಳನ್ನು ಬರೆ:-
1. ಅಂಜುಬುರುಕ ಧೈರ್ಯವಂತ.
2. ಮೊದಲು ಕೊನೆ.
3. ಉಳಿವು ಅಳಿವು.
4. ಅತಿವೃಷ್ಟಿ-ಅನಾವೃಷ್ಟಿ.
V ಕೊಟ್ಟಿರುವ ಪದಗಳನ್ನು ಓದಿ ಧ್ವನಿ ಮತ್ತು ಅರ್ಥ ವ್ಯತ್ಯಾಸ ಗಮನಿಸಿ ವಾಕ್ಯ ರಚಿಸಿ:-
1.ಹರಸು –ಅರಸು:
1. ಹುಲಿ ಕಾಡಿನಲ್ಲಿ ಆಹಾರ ಅರಸುತ್ತಾ ತಿರುಗಾಡುತ್ತಿದ್ದು.
1.ನನ್ನ ತಂದೆ ನನ್ನನ್ನು ಹರಸಿದರು.
2. ಹಲ್ಲಿ- ಅಲ್ಲಿ
2. ಅಲ್ಲಿ ಒಂದು ಮರವಿದೆ.
2.ಗೋಡೆ ಮೇಲೆ ಹಲ್ಲಿ ಇದೆ.
3. ಹುಳಿ -ಉಳಿ
3.ನನ್ನ ಹತ್ತಿರ ಹತ್ತು ರೂಪಾಯಿ ಉಳಿದಿದೆ.
3. ಹುಣಸೆಹಣ್ಣು ತುಂಬಾ ಹುಳಿಯಾಗಿರುತ್ತದೆ
VIಪ್ರಶ್ನೆಗಳಿಗೆ ಉತ್ತರಿಸಿ:-
1. ಕಾಡಿಗೆ ಮರ ಕಡಿಯಲು ಬಂದವರು?
A:- ಕಾಡಿಗೆ ಮರ ಕಡಿಯಲು ಬಂದವರು ಮಾನವರು.
2. ಮಾನವ ಯಾರನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು?
A:- ಮಾನವ ಮೊಲವನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು.
3. ಕೋತಿ ಮಾನವನನ್ನು ಏನೆಂದು ಪ್ರಶ್ನಿಸಿತು?
A:- ಕೋತಿ ಮಾನವನನ್ನು ಜಿಂಕೆಯ ಕಣ್ಣಿನತoಹ ಕಣ್ಣು ನವಿಲಿನ ನಡಿಗೆ ಅಂತಹ ನಡಿಗೆ ಇರಬೇಕು ಎಂದೆಲ್ಲ ಹೇಳುವ ನೀವು ಸುಂದರವೋ ಅಥವಾ ನಾವು ಸುಂದರವು ಎಂದು ಕೇಳಿತು.
4.ಮೊಲವು ಮಾನವನನ್ನು ಅವಿವೇಕಿಯೆಂದು ಹೇಳಿದ್ದು ಏಕೆ?
A:- ಮೊಲ ಮಾನವನಿಗೆ ನಿನಗಿನ್ನು ಬುದ್ಧಿ ಬರಲಿಲ್ಲವೇ ಈಗಾಗಲೇ ಕಾಡಿನ ನಾಶದಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಾವು ಸಂಭವಿಸುತ್ತಿದೆ ಆದರೂ ಕಾಡಿನ ನಾಶಕ್ಕೆ ಮುಂದಾಗಿರುವಯಲ್ಲಾ ನಿನಗಿದೋ ಬುದ್ಧಿ ಬರಲಿಲ್ಲ ಅವಿವೇಕಿ ಎಂದು ಹೇಳಿತು
5.ರಾಜು ಕಂಡ ಕನಸೇನು?
A:-ರಾಜು ಕಂಡ ಕನಸಿನಲ್ಲಿ ಕಾಡಿನ ಪ್ರಾಣಿಗಳೆಲ್ಲಾ ಸೇರಿ ಮರಕಡಿಯಲು ಹೋದ ಮನುಷ್ಯನ ಮನಪರಿವರ್ತನೆ ಮಾಡಿದ ಹಾಗೆ ಕನಸು ಬಿದ್ದಿತ್ತು
6.ಮಾನವನ ಸವಾಲಿಗೆ ಕಾಗೆಯ ಉತ್ತರವೇನು?
A:- ನಾವೆಲ್ಲ ಗೀಜಗನ ಗೂಡು ಜೇನುಗೂಡು ಗೆದ್ದಲು ಹುಳು ಕಟ್ಟುವ ಹುತ್ತಗಳು ಎಷ್ಟು ಸುಂದರವಾಗಿವೆ ಮತ್ತು ಸುರಕ್ಷಿತವಾಗಿವೆ ಆದರೆ ನಾವು ಮಾಡಿರುವ ಸಾಧನೆಯ ಮುಂದೆ ನೀವು ಪ್ರಕೃತಿಯ ನಾಶವನ್ನು ಮಾಡಲು ಹೊರಟಿದ್ದೀರಿ ನಿಮ್ಮ ಸಾಧನೆ ಶೂನ್ಯ ಎಂದು ಹೇಳಿತು
VII ಈ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು:-
1. “ಸಾಲುಮರದ ತಿಮ್ಮಕ್ಕ ನನ್ನು ನೋಡಿ ಕಲಿ”
A:- ಈ ಮಾತನ್ನು ಮರ ಮಾನವನಿಗೆ ಹೇಳಿತು.
2.” ನಾವು ಪ್ರಾಣಿಗಳಿಂದ ಕಲಿಯೋದು ಬಹಳಷ್ಟಿದೆ”
A:-ಈ ಮಾತನ್ನು ಅಮ್ಮ ರಾಜುವಿಗೆ ಹೇಳಿದಳು.
VII ಚಟುವಟಿಕೆ: ಯಾವುದಾದರೂ ಐದು ಪ್ರಾಣಿ ಪಕ್ಷಿಗಳ ಚಿತ್ರವನ್ನು ಅಂಟಿಸಿ
0 Comments