ಪಾಠ-7 ಪ್ರಾಮಾಣಿಕ ಬಾಲಕ
I ಪದಗಳ ಅರ್ಥವನ್ನು ಬರೆಯಿರಿ:-
1.ಪ್ರವೇಶಿಸು ==ಒಳಗೆ ಹೋಗು.
2.ಪ್ರಾಮಾಣಿಕತೆ ==ನಂಬಿಕೆಗೆ ಅರ್ಹ.
3.ಒಡನಾಟ ==ಸಹವಾಸ.
4.ಪತಾಕೆ ==ಬಾವುಟ= =ಧ್ವಜ.
5.ಪಕ್ವ ==ಹಣ್ಣಾದ.
6.ಧಾವಿಸು ==ಬೇಗ ಬರುವುದು.
7.ಗಲಿಬಿಲಿ ==ಗಡಿಬಿಡಿ.
8.ನೇತೃತ್ವ== ನಾಯಕತ್ವ.
II ಒಂದು ಪದದಲ್ಲಿ ಬರೆಯಿರಿ:-
1.ಸಾಮೂಹಿಕ ಹೋರಾಟ ==ಚಳುವಳಿ.
2.ಮಂತ್ರಿಗಳ ಸಮಿತಿ ==ಮಂತ್ರಿಮಂಡಲ.
3.ಗಟ್ಟಿಯಾಗಿ ಹೇಳುವುದು== ಘೋಷಣೆ.
4ಉದ್ಯೋಗ ಸ್ಥಾನ ಅಧಿಕಾರ ಮೊದಲ ಅವುಗಳಿಂದ ಬಿಡುಗಡೆ ಮಾಡಬೇಕೆಂದು ಕೇಳಿದರೆ ಬರೆದುಕೊಡುವ ಪತ್ರ ==ರಾಜೀನಾಮೆ.
IIIಬಿಟ್ಟಿರುವ ಸ್ಥಳವನ್ನು ತುಂಬಿರಿ:-
1.ದಾರಿಬದಿಯ ಮಾವಿನ ತೋಪಿನಲ್ಲಿದ್ದ ಹಣ್ಣುಗಳು ಆಕರ್ಷಿಸಿದವು.
2.ಶಾಸ್ತ್ರೀ ಯವರಲ್ಲಿ ದೇಶಪ್ರೇಮ ಪುಟಿದೆದ್ದಿತು.
.
3.ಶಾಸ್ತ್ರೀಜಿಯವರು ಗಾಂಧೀಜಿಯವರ ಒಡನಾಟದಲ್ಲಿ ಅನೇಕ ಚಳುವಳಿಗಳಲ್ಲಿ ಪಾಲ್ಗೊಂಡರು.
4. ನಮ್ಮ ದೇಶವು ಸಾವಿರ 1947 ಆಗಸ್ಟ್ 15ರಂದು ಸ್ವತಂತ್ರವಾಯಿತು.
5.ಭಾರತ ದೇಶದ ಪ್ರಧಾನ ಪ್ರಥಮ ಪ್ರಧಾನಿ ನೆಹರು .
6.ಶಾಸ್ತ್ರೀಜಿಯವರು ಜನತೆಗೆ ನೀಡಿದ ಘೋಷವಾಕ್ಯ ಜೈ ಜವಾನ್ ಜೈಕಿಸಾನ್ .
IV ಮಾದರಿಯಂತೆ ವಾಕ್ಯ ರಚಿಸಿರಿ:-
1.ನಾನು ಹಣ್ಣನ್ನು ತಿಂದೆನು
2.ನೀನು ಹಣ್ಣನ್ನು ತಿಂದೆ
3.ನಾವು ಹಣ್ಣನ್ನು ತಿಂದೆವು
4.ಅವನು ಹಣ್ಣನ್ನು ತಿಂದನು
5.ಅವಳು ಹಣ್ಣನ್ನು ತಿಂದಳು
6.ನೀವು ಹಣ್ಣನ್ನು ತಿಂದಿರಿ
Vಸ್ವಂತ ವಾಕ್ಯವನ್ನು ರಚಿಸಿರಿ:-
1.ಮನೆಮಾತಾಗು ==ಶಾಸ್ತ್ರೀಜಿಯವರು ತಮ್ಮ ಪ್ರಾಮಾಣಿಕತೆ ಹಾಗೂ ದೇಶಪ್ರೇಮದ ನಡವಳಿಕೆಗಳಿಂದ ದೇಶದಲ್ಲಿದೆ ಮನೆಮಾತಾದರು.
2. ಹೊಣೆಹೊತ್ತು ==ನಮ್ಮ ತಂದೆಯವರು ನಮ್ಮಮನೆಯ ಹೊಣೆ ಹೊತ್ತಿದ್ದಾರೆ.
3.ಪುಟಿದೇಳು ==ನನ್ನಲ್ಲಿ ದೇಶಪ್ರೇಮ ಪುಟಿದೇಳುತ್ತದೆ.
4.ಆಕರ್ಷಿಸು== ನನಗೆ ಚಲನಚಿತ್ರ ಆಕರ್ಷಿಸುತ್ತದೆ.
VI ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ:-
1.ಮಕ್ಕಳು ತೋಪನ್ನು ಏಕೆ ಪ್ರವೇಶಿಸಿದರು?
A:- ಮಕ್ಕಳು ಹಣ್ಣು ತಿನ್ನುವ ಆಸೆಯಿಂದ ತೋಪನ್ನು ಪ್ರವೇಶಿಸಿದರು
2.ಮಕ್ಕಳು ಏಕೆ ಗಲಿಬಿಲಿಗೊಂಡರು?
A:-ಅನಿರೀಕ್ಷಿತವಾಗಿ ಬಂದ ತೋಟದ ಮಾಲೀಕನನ್ನು ಕಂಡು ಮಕ್ಕಳು ಗಲಿಬಿಲಿಗೊಂಡರು.
3.ಮಾಲೀಕನ ಮನಸ್ಸು ಏಕೆ ಕರಗಿತ್ತು?
A:-ಬಾಲಕನ ಮುಗ್ಧ ಹಾಗೂ ಪ್ರಾಮಾಣಿಕ ಮಾತುಗಳನ್ನು ಕೇಳಿ ಮಾಲೀಕನ ಮನಸು ಕರಗಿತ್ತು.
4.ಶಾಸ್ತ್ರೀಜಿ ಅವರಿಗೆ ಸರ್ಕಾರ ಯಾವ ಪ್ರಶಸ್ತಿ ನೀಡಿ ಗೌರವಿಸಿತ್ತು?
A:-ಶಾಸ್ತ್ರೀಜಿ ಅವರಿಗೆ ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.
VIIಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ:-
1.ಬಾಲಕ ಮಾಲೀಕನಿಗೆ ಏನೆಂದು ಹೇಳಿದನು?
A:-ಬಾಲಕ ಮಾಲೀಕನಿಗೆ ವಿನಯದಿಂದ ನಾನು ಮಾಡಿದ್ದು ತಪ್ಪು ಇನ್ನೆಂದೂ ಇಂತಹ ತಪ್ಪನ್ನು ಮಾಡುವುದಿಲ್ಲ ಆದರೆ ನಾನು ಮಾಡಿದ ತಪ್ಪಿಗೆ ನನ್ನ ತಂದೆ ತಾಯಿ ಮತ್ತು ಗುರುಗಳು ನಿಂದನೆಗೆ ಗುರಿಯಾದರು ಎಂದು ದುಃಖಿಸುತ್ತಿರುವೆ ಎಂದನು.
2.ಮಾಲೀಕ ಬಾಲಕನನ್ನು ಹೇಗೆ ಸಮಾಧಾನ ಮಾಡಿದನು?
A:-ಮಾಲೀಕ ಬಾಲಕನನ್ನು ಕುರಿತು ಮಗು ನಿನ್ನ ತಪ್ಪನ್ನು ನೀನು ಒಪ್ಪಿಕೊಂಡಿರುವೆ ನಿನ್ನ ಪ್ರಾಮಾಣಿಕತೆ ನನಗೆ ಇಷ್ಟವಾಯಿತು ತಪ್ಪನ್ನು ಅರಿಯುವ ತಿದ್ದಿಕೊಳ್ಳುವ ನಿನ್ನ ಗುಣ ನಿನ್ನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಹೇಳಿ ಮತ್ತಷ್ಟು ಮಾವಿನಹಣ್ಣುಗಳನ್ನು ನೀಡಿ ಸಮಾಧಾನ ಪಡಿಸಿದರು.
3.ಶಾಸ್ತ್ರೀಜಿಯವರು ಮಂತ್ರಿಪದವಿಗೆ ಏಕೆ ರಾಜೀನಾಮೆ ನೀಡಿದರು?
A:-ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾದ ಜವಾಹರ್ಲಾಲ್ ನೆಹರು ಅವರ ಮಂತ್ರಿಮಂಡಲದಲ್ಲಿ ರೈಲ್ವೆ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಅಪಘಾತವೊಂದಕ್ಕೆ ತಾವೇ ಹೊಣೆ ಹೊತ್ತು ಕೊಂಡು ತಪ್ಪು ತಮ್ಮದಲ್ಲದಿದ್ದರೂ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು.
VIII ಈ ಕೆಳಗಿನ ಹೇಳಿಕೆಗಳಿಗೆ ಕಾರಣ ಕೊಡಿರಿ:-
1.ಮಾಲೀಕ ಹೊಡೆಯದಿದ್ದರೆ ಬಾಲಕ ಅತ್ತನು.
A:-ಏಕೆಂದರೆ ಬಾಲಕನ ತಪ್ಪಿನಿಂದ ಅವರ ತಂದೆತಾಯಿಗಳು ಗುರುಗಳು ನಿಂದನೆಗೆ ಗುರಿಯಾದರು ಎಂದು ಬಾಲಕ ಆಳುತ್ತಿದ್ದನು.
2.ಶಾಸ್ತ್ರಿಯವರು ದೇಶದಲ್ಲೆಡೆ ಮನೆಮಾತಾದರು.
A:-ತಮ್ಮ ಪ್ರಾಮಾಣಿಕತೆ ಹಾಗೂ ದೇಶಪ್ರೇಮದ ನಡವಳಿಕೆಗಳಿಂದ ದೇಶದಲ್ಲೆಡೆ ಮನೆಮಾತಾದರು.
IX ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು:-
1.”ನಿನ್ನ ಅಪ್ಪ-ಅಮ್ಮ ಗುರುಗಳು ಇದನ್ನೇ ಏನು ಕಲಿಸಿದ್ದು”
A:-ಈ ಮಾತನ್ನು ತೋಟದ ಮಾಲೀಕ ಬಾಲಕನಿಗೆ ಕೇಳಿದರು.
2.”ಇನ್ನೆಂದೂ ಇಂತಹ ತಪ್ಪು ಮಾಡುವುದಿಲ್ಲ”
A:-ಈ ಮಾತನ್ನು ಬಾಲಕ ಮಾಲೀಕನಿಗೆ ಹೇಳಿದನು.
3.”ನಿನ್ನ ಈ ಗುಣ ನಿನ್ನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ”
A:-ಈ ಮಾತನ್ನು ತೋಟದ ಮಾಲೀಕ ಬಾಲಕನಿಗೆ ಹೇಳಿದನು.
0 Comments