ಸ್ವಾತಂತ್ರ್ಯ ದಿನಾಚರಣೆ
I ಪದಗಳ ಅರ್ಥ ಬರೆಯಿರಿ:-
1.ರಾಷ್ಟ್ರ== ದೇಶ
2.ಸರದಿ ==ಅನುಕ್ರಮ
3.ಸ್ವಾಭಿಮಾನ ==ಆತ್ಮಗೌರವ
4.ಸ್ಪರ್ಧೆ ==ಪೈಪೋಟಿ
5.ತಳಿರು ==ಚಿಗುರು
6.ಅಭಿಪ್ರಾಯ== ಅನಿಸಿಕೆ
7.ಧ್ವಜಸ್ತಂಭ ==ಬಾವುಟ ಹಾರಿಸುವ ಕಂಬ
8.ಭಾವಚಿತ್ರ== ವ್ಯಕ್ತಿಯ ಚಿತ್ರ
9.ಆಮಂತ್ರಿಸು ==ಆಹ್ವಾನಿಸು
10.ನೆರೆ ==ಒಟ್ಟಾಗಿ
11. ಮಾರ್ಗದರ್ಶನ== ತಿಳಿಹೇಳುವುದು
12.ನಸುಕು== ಮುಂಜಾನೆ
13.ಜಯಘೋಷ ==ಜಯಕಾರ
14.ವಿಜೇತರು== ಗೆದ್ದವರು
II ಒಂದು ಪದದಲ್ಲಿ ಉತ್ತರಿಸಿ:-
1.ಆಹ್ವಾನಿತ ವ್ಯಕ್ತಿ ==ಅತಿಥಿ.
2.ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮ ==ಸಾಂಸ್ಕೃತಿಕ ಕಾರ್ಯಕ್ರಮ .
3.ದೇಶ ಸೇವೆ ಮಾಡಿದ ಮಹನೀಯರು ==ರಾಷ್ಟ್ರನಾಯಕರು.
4.ಬೆಳಗಿನ ಜಾವದಲ್ಲಿ ನಡೆಸುವ ಮೆರವಣಿಗೆ ==ಪ್ರಭಾತಪೇರಿ.
5.ಒಂದೇ ರೂಪದ ವಸ್ತ್ರ== ಸಮವಸ್ತ್ರ.
III ಜೋಡಿ ನುಡಿ ಗಳನ್ನು ಬರೆಯಿರಿ:-
1.ತಳಿರು-ತೋರಣ
2.ಸಿಹಿ-ಕಹಿ
3.ಹಳ್ಳಕೊಳ್ಳ
4.ಬೆಟ್ಟ-ಗುಡ್ಡ
5.ನೋವು-ನಲಿವು
IVಸಮಾನಾರ್ಥಕ ಪದಗಳನ್ನು ಬರೆಯಿರಿ:-
1.ವಸ್ತ್ರ ಬಟ್ಟೆ ಅರಿವೆ
2.ಧ್ವಜ ಬಾವುಟ ಪತಾಕೆ
3.ನಸುಕು ಮುಂಜಾನೆ ಬೆಳಿಗ್ಗೆಬೆಳಗಿನ ಜಾವ
4.ಸಿದ್ಧತೆ ತಯಾರು ರೆಡಿಯಾಗು
5.ಹೂ ಪುಷ್ಪ ಕುಸುಮ
Vಬಿಟ್ಟಿರುವ ಸ್ಥಳವನ್ನು ತುಂಬಿರಿ:-
1.ಸಮಾನಾರ್ಥಕ ಪದಗಳು ಎಂದರೆ ಒಂದೇ ಅರ್ಥ ಕೊಡುವ ಬೇರೆ ಬೇರೆ ಪದಗಳು.
2.ವಾಕ್ಯವೆಂದರೆ ಸರಿಯಾದ ಅರ್ಥ ಕೊಡುವ ಪದಗಳ ಗುಂಪು.
VI .ಸರಿಯಾದ ಅರ್ಥಬರುವಂತೆ ಪದಗಳನ್ನುಜೋಡಿಸಿ ವಾಕ್ಯಗಳನ್ನು ಬರೆ:-
1.ಸಮವಸ್ತ್ರ ಮಕ್ಕಳು ಧರಿಸಿ ಬಂದರು ಶಾಲೆಗೆ.
A:-ಮಕ್ಕಳು ಸಮವಸ್ತ್ರ ಧರಿಸಿ ಶಾಲೆಗೆ ಬಂದರು.
2.ಮಕ್ಕಳು ಸಾಂಸ್ಕೃತಿಕ ನಡೆಸಿಕೊಟ್ಟರು ಕಾರ್ಯಕ್ರಮ.
A:-ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
3.ಕೈತೋಟದಲ್ಲಿ ಶಾಲೆಯ ಗಿಡಗಳಿವೆ.
A:-ಶಾಲೆಯ ಕೈತೋಟದಲ್ಲಿ ಹೂ ಗಿಡಗಳಿವೆ.
VIII.ಸರಿ-ತಪ್ಪು ಗುರುತಿಸಿ:-
1.ಕಾರ್ಯಕ್ರಮ ಮಾಡುವಾಗ ಕೆಲಸ ಹಚ್ಚಿಕೊಳ್ಳಬಾರದು --ತಪ್ಪು.
2.ಕಾರ್ಯಕ್ರಮ ಮಾಡುವಾಗ ಸಭೆಯಲ್ಲಿ ಚರ್ಚೆ ಮಾಡಬೇಕು- -ಸರಿ
3.ಚರ್ಚೆಯಲ್ಲಿ ಇತರರು ಮಾತನಾಡುವಾಗ ಕೇಳಿಸಿಕೊಳ್ಳಬೇಕು-- ಸರಿ
4.ಸಭೆಯಲ್ಲಿ ಒಟ್ಟಾಗಿ ಮಾತನಾಡಿದರೆ ತೊಂದರೆ -ಸರಿ
5.ಸಭೆಯಲ್ಲಿ ಒಬ್ಬರ ನಂತರ ಒಬ್ಬರು ಮಾತನಾಡಬಾರದು ತಪ್ಪು
6.ಇತರರ ಒಳ್ಳೆಯ ಮಾತನ್ನು ಕೇಳಬೇಕು --ಸರಿ
VIIIಈ ಪದಗಳನ್ನು ಬಳಸಿ ಸ್ವಂತ ವಾಕ್ಯವನ್ನು ರಚಿಸಿರಿ:-
1.ತೋರಣ --ಹಬ್ಬದ ದಿನ ನಮ್ಮ ಮನೆಯಲ್ಲಿ ತೋರಣವನ್ನು ಕಟ್ಟುತ್ತೇವೆ,
2.ರಂಗವಲ್ಲಿ-- ಹಬ್ಬದ ದಿನ ನಮ್ಮ ಮನೆಯ ಮುಂದೆ ರಂಗವಲ್ಲಿಯನ್ನು ಬಿಡಿಸುತ್ತೇವೆ,
3.ಬಹುಮಾನ--- ನಾನು ಶಾಲೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದೇನೆ.
4. ಸಮವಸ್ತ್ರ-- ಶಾಲೆಗೆ ಹೋಗುವ ಮಕ್ಕಳೆಲ್ಲಾ ಸಮವಸ್ತ್ರವನ್ನು ಧರಿಸ ಶಾಲೆಗೆ ಹೋಗಬೇಕು.
IX ಪ್ರಶ್ನೆಗಳಿಗೆ ಉತ್ತರಿಸಿ:-
1.ಮುಖ್ಯಗುರುಗಳು ಯಾರ ಸಭೆ ಕರೆದರು?
A:-ಮುಖ್ಯಗುರುಗಳು ಸಾಲ ಮಂತ್ರಿಮಂಡಲದ ಸಭೆ ಕರೆದರು.
2.ಸ್ವಾತಂತ್ರ್ಯ ದಿನವನ್ನು ಎಂದು ಆಚರಿಸುತ್ತೇವೆ?
A:-ಸ್ವಾತಂತ್ರ್ಯ ದಿನವನ್ನು ಆಗಸ್ಟ್ 15ರಂದು ಆಚರಿಸುತ್ತೇವೆ.
3.ಯಾರು ಕ್ಷಮೆ ಕೋರಿದರು ?
A:-ಸಂಸ್ಕೃತಿ ಮಂತ್ರಿ ಐಶ್ವರ್ಯ ಕ್ಷಮೆ ಕೋರಿದರು.
4.ಮಂತ್ರಿಮಂಡಲದ ಸಭೆಯಲ್ಲಿ ಯಾವುದರ ಬಗ್ಗೆ ಚರ್ಚಿಸಿದರು?
A:-ಮಂತ್ರಿಮಂಡಲದ ಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಬಗ್ಗೆ ಚರ್ಚಿಸಿದರು.
5.ಸ್ವಾತಂತ್ರ್ಯ ದಿನಾಚರಣೆ ಎಂದರೇನು?
A:-ದೇಶ ಸ್ವತಂತ್ರವಾದ ಸವಿನೆನಪಿಗೆ ಪ್ರತಿ ವರ್ಷ ದೇಶಾದ್ಯಂತ ಆಚರಿಸುವ ಹಬ್ಬವೇ ಸ್ವಾತಂತ್ರ್ಯ ದಿನಾಚರಣೆ.
6.ಐಶ್ವರ್ಯ ನೀಡಿದ ಸಲಹೆ ಏನು?
A:-ಐಶ್ವರ್ಯ ಗುರುಗಳೇ ನಾವು ಕೆಲಸ ಹಂಚಿಕೊಂಡು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಸಲಹೆ ನೀಡಿದಳು.
7.ಕ್ರೀಡಾಮಂತ್ರಿ ವಹಿಸಿಕೊಂಡ ಕಾರ್ಯವೇನು?
A:-ಕ್ರೀಡಾಮಂತ್ರಿ ವಿವೇಕ ಮಂತ್ರಿಮಂಡಲದ ಎಲ್ಲ ಸದಸ್ಯರು ಸೇರಿ ಆಟೋಟ ಸ್ಪರ್ಧೆ ನಡೆಸಿ ವಿಜೇತರ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸವನ್ನು ವಹಿಸಿಕೊಂಡನು.
8.ಮೂರನೇ ತರಗತಿಯವರು ವಹಿಸಿಕೊಂಡ ಕಾರ್ಯ ಯಾವುದು?
A:-ಮೂರನೇ ತರಗತಿಯವರ ಧ್ವಜಸ್ತಂಭವನ್ನು ಸಿಂಗರಿಸುವ ಕೆಲಸವನ್ನು ವಹಿಸಿಕೊಂಡರು.
X ಈ ಕೆಳಗಿನ ವಾಕ್ಯಗಳಿಗೆ ಕಾರಣವನ್ನು ಕೊಡಿರಿ:-
1.ಮುಖ್ಯಗುರುಗಳು ಮಂತ್ರಿಮಂಡಲದ ಸಭೆ ಕರೆದರು .
A:-ಮುಖ್ಯಗುರುಗಳು ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ಬಗ್ಗೆ ಚರ್ಚಿಸಲು ಮಂತ್ರಿಮಂಡಲದ ಸಭೆ ಕರೆದರು.
2.ಇತರರು ಮಾತನಾಡುವಾಗ ಕೇಳಿಸಿಕೊಳ್ಳಬೇಕು .
A:-ಏಕೆಂದರೆ ಇತರರ ಅಭಿಪ್ರಾಯಗಳನ್ನು ನಾವು ತಿಳಿದುಕೊಳ್ಳಬೇಕು.
3.ಸಭೆಯಲ್ಲಿ ಒಟ್ಟಾಗಿ ಮಾತನಾಡಬಾರದು.
A:- ಏಕೆಂದರೆ ಎಲ್ಲರೂ ಒಟ್ಟಾಗಿ ಮಾತನಾಡಿದರೆ ಯಾವುದು ತಿಳಿಯುವುದಿಲ್ಲ.
0 Comments