ಪಾಠ -1 ತುತ್ತೂರಿ
I ಪದಗಳ ಅರ್ಥ:-
1. ಕಾಸು = ಹಣ
2.ಜಂಬ = ಅಹಂಕಾರ
3. ಹಾಳಾಗು= ಕೆಟ್ಟು ಹೋಗು
4. ಸದ್ದು = ಸಪ್ಪಳ
5. ಸಂಜೆ = ಸಾಯಂಕಾಲ
II ಒಂದು ಪದದಲ್ಲಿ ಉತ್ತರಿಸಿ :-
1.ತೆಳುವಾದ ಲೋಹದ ಹಾಳೆ = ತಗಡು
2.ನೀರಿನ ತಾಣ = ಕೊಳ
3. ಊದುವ ವಾದ್ಯ = ತುತ್ತೂರಿ
4. ಸಂಗೀತದ ಏಳು ಸ್ವರಗಳು = ಸರಿಗಮಪದನಿ
III ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:-
1. ಕಸ್ತೂರಿಯು ಏನನ್ನು ಕೊಂಡನು?
A:- ಕಸ್ತೂರಿಯು ತುತ್ತೂರಿಯನ್ನು ಕೊಂಡನು.
2. ಕಸ್ತೂರಿ ತುತ್ತೂರಿಯನ್ನು ಎಲ್ಲಿ ಊದಿದನು?
A:- ಕಸ್ತೂರಿ ತುತ್ತೂರಿಯನ್ನು ಕೊಳದ ಬಳಿ ಊದಿದನು.
3. ಕಸ್ತೂರಿ ತುತ್ತೂರಿಯನ್ನು ಯಾವಾಗ ಊದಿದನು?
A:- ಕಸ್ತೂರಿ ತುತ್ತೂರಿಯನ್ನು ಸಂಜೆಯಲ್ಲಿ ಊದಿದನು.
4. ಜಂಬದ ಕೋಳಿ ಯಾರು?
A:- ಜಂಬದ ಕೋಳಿ ಕಸ್ತೂರಿ.
5. ಜಂಬದಕೋಳಿಗೆ ಏಕೆ ಗೊಳಾಯಿತು?
A:- ಜಂಬದಕೋಳಿಗೆ ತುತ್ತೂರಿ ನೀರಿಗೆ ಬಿದ್ದು ಗೊಳಾಯಿತು .
6.ತುತ್ತೂರಿ ಏನಾಯಿತು?
A:- ತುತ್ತೂರಿ ಹಾಳಾಯ್ತು.
IV ಬಿಟ್ಟಿರುವ ಸ್ಥಳವನ್ನು ತುಂಬಿರಿ:-
1. ಬಣ್ಣದ ತಗಡಿನ ತುತ್ತೂರಿ
2.ಕಸ್ತೂರಿ ನಡೆದನು ಬೀದಿಯಲಿ
3.ಜಾರಿತು ನೀರಿಗೆ ತುತ್ತೂರಿ
4.ಬಣ್ಣದ ತುತ್ತೂರಿ ಹಾಳಾಯ್ತು
V ಈ ಕಥೆಯನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:-
ಬೀರೂರಿನಲ್ಲಿ ರಾಮಣ್ಣ ಎಂಬ ಕಟ್ಟಿಗೆ ವ್ಯಾಪಾರಿಯು ವಾಸಿಸುತ್ತಿದ್ದನು, ಅವನು ತುಂಬಾ ಬಡವ ನಾಗಿದ್ದನು ,ಅವನು ಪ್ರತಿದಿನ ಬೆಳಗ್ಗೆ ಕಾಡಿಗೆ ಹೋಗಿ ಒಣ ಮರವನ್ನು ಕಡಿದು ತರುತ್ತಿದ್ದರು, ಪೇಟೆಯಲ್ಲಿ ಕಟ್ಟಿಗೆ ಮಾರಿ ಜೀವನ ನಡೆಸುತ್ತಿದ್ದನು, ಅವನು ಎಂದು ಹಸಿ ಮರವನ್ನು ಕಡಿದವನಲ್ಲ ,ಇದಕ್ಕಾಗಿ ಇವನಿಗೆ ವನ ದೇವತೆಯು ಅಕ್ಷಯಪಾತ್ರೆಯನ್ನು ನೀಡಿದಳು, ಇದರಿಂದ ರಾಮಣ್ಣ ಶ್ರೀಮಂತ ನಾದನು.
1.ರಾಮಣ್ಣ ಯಾರು?
A:- ರಾಮಣ್ಣ ಒಬ್ಬ ಕಟ್ಟಿಗೆ ವ್ಯಾಪಾರಿ.
2. ರಾಮಣ್ಣ ಎಲ್ಲಿ ವಾಸಿಸುತ್ತಿದ್ದನು?
A:- ರಾಮಣ್ಣ ಬೀರೂರಿನಲ್ಲಿ ವಾಸಿಸುತ್ತಿದ್ದನು.
3. ರಾಮಣ್ಣ ಯಾವಾಗ ಕಾಡಿಗೆ ಹೋಗುತ್ತಿದ್ದನು?
A;- ರಾಮಣ್ಣ ಪ್ರತಿದಿನ ಬೆಳಿಗ್ಗೆ ಕಾಡಿಗೆ ಹೋಗುತ್ತಿದ್ದನು.
4. ವನ ದೇವತೆಯೂ ರಾಮಣ್ಣನಿಗೆ ಅಕ್ಷಯಪಾತ್ರೆಯನ್ನು ಏಕೆ ನೀಡಿದಳು?
A:- ರಾಮಣ್ಣ ಎಂದು ಹಸಿ ಮರವನ್ನು ಕಡಿಯುತ್ತಿರಲಿಲ್ಲಿ ಅದರಿಂದ ದೇವತೆಯು ಅಕ್ಷಯಪಾತ್ರೆಯನ್ನು ನೀಡಿದಳು.
5. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
A:- ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.
6. ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಿದ್ದಾರೆ?
A:- ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದ್ದಾರೆ
VI ಹೊಂದಿಸಿ ಬರೆಯಿರಿ:-
1. ಪಾಲು + ಆಯ್ತು = ಪಾಲಾಯ್ತು
2. ಗೋಳು + ಆಯ್ತು = ಗೋಳಾಯ್ತು
3. ಹಾಳು + ಆಯ್ತು = ಹಾಳಾಯ್ತು
4.ಬೋಳು + ಆಯ್ತು = ಬೋಳಾಯ್ತು
VII ಪ್ರಾಸ ಪದಗಳನ್ನು ಬರೆಯಿರಿ:-
1.ಹಾಳಾಯಿತು---- ಗೋಳಾಯ್ತು
2.ತುತ್ತೂರಿ---- ಕಸ್ತೂರಿ
3. ಬೀದಿಯಲ್ಲಿ---ರೀತಿಯಲ್ಲಿ
4.ಕೊಳದ ಬಳಿ---ಸಂಜೆಯಲಿ
5. ತುತ್ತೂರಿ- ---ನೀರೂರಿ
6.ನೋಡಿದನು---- ಮಾಡಿದನು
7.ಪಾಲಾಯಿತು--- ಬೋಳಾಯಿತು
VIII ಈ ಕೆಳಗೆ ನೀಡಿರುವ ಪದಗಳಲ್ಲಿ ಸರಿಯಾದುದನ್ನು ಆರಿಸಿ ಬಿಟ್ಟ ಸ್ಥಳವನ್ನು ತುಂಬಿ:-
1. ನೋಡಲು ಬೇಕು ಕಣ್ಣು ತಿನ್ನಲು ಬೇಕು ಹಣ್ಣು
2. ಹಾರುತ ಬಂತು ಹಕ್ಕಿ ತಿಂದಿತು ಕಾಳನ್ನು ಹೆಕ್ಕಿ
3.ಅನ್ನಕೆ ಬೇಕು ಸಾರು ಕುಡಿಯಲು ಬೇಕು ನೀರು
4. ನಾಯಿ ತೆರೆಯಿತು ತನ್ನಯ ಬಾಯಿ
0 Comments