4th standard Kannada( Buddivanta Ramakrishna)

 

ಪಾಠ-2ಬುದ್ದಿವಂತ ರಾಮಕೃಷ್ಣ

I ಪದಗಳ ಅರ್ಥ ಬರೆಯಿರಿ:-

1. ಸತ್ಕರಿಸು =ಉಪಚರಿಸು

2.ವಾದ= ಚರ್ಚೆ

3.ಪೇಚಾಡು =ಪರದಾಡು

4.ಅಪ್ಪಣೆ= ಒಪ್ಪಿಗೆ

5.ಪಂಡಿತ =ವಿದ್ವಾಂಸ 

 6.ಪೀಠ=ಆಸನ

 

II ಒಂದು ಪದದಲ್ಲಿ ಉತ್ತರಿಸಿ:-

1.ಯಾರಿಗೂ ತಿಳಿಸದಂತೆ ಹಾಗೂ ಕಾಣದಂತೆ ಜಾಗ.ಬಿಟ್ಟು

ಹೋಗುವುದು =ಪಲಾಯನ.

2.ಒಬ್ಬರಿಗೊಂದು ಮತ್ತೊಬ್ಬರಿಗೆ ಒಂದು ಮಾಡುವವನು= ಪಕ್ಷಪಾತಿ.

3.ಮುಖದಲ್ಲಿ ನಗು ತುಂಬಿದ್ದು ಸಂತೋಷ ಎದ್ದುಕಾಣುವುದು =ಮುಖ ಅರಳಿತು.

 

III ಬಿಟ್ಟಿರುವ ಪದವನ್ನು ಬರೆಯಿರಿ:-

1.ವಿದ್ಯೆ ವಿನಯವನ್ನು ಕಲಿಸುತ್ತದೆ ಬುದ್ಧಿ ವಿವೇಕವನ್ನು ಕಲಿಸುತ್ತದೆ.

2.ತಿಲಕಾಷ್ಠಮಹಿಷಬಂಧನ ಎಂದರೆ ಎಮ್ಮೆಯನ್ನು ಕಟ್ಟುವ ಹಗ್ಗ.

IV ಮಾದರಿಯಂತೆ ಕೂಡಿಸಿ ಬರೆಯಿರಿ:-

1.ಎಮ್ಮೆ+ಗಳು  =ಎಮ್ಮೆಗಳು

2.ಕಟ್ಟಿಗೆ+ಗಳು =ಕಟ್ಟಿಗೆಗಳು

3.ಮುಖ+ಗಳು =ಮುಖಗಳು

4.ಗ್ರಂಥ+ಗಳು =ಗ್ರಂಥಗಳು

5.ಕಣ್ಣು+ಗಳು =ಕಣ್ಣುಗಳು

 

V ಈ ಕೆಳಗಿನ ವಾಕ್ಯಗಳನ್ನು ಸರಿಪಡಿಸಿ ಬರೆಯಿರಿ:-

 1.ನಾವು ಶಾಲೆಗೆ ಹೋಗುತ್ತೇನೆ.

A;-ನಾನು ಶಾಲೆಗೆ ಹೋಗುತ್ತೇನೆ .

 

2.ಶೀಲಾ ಕಥೆ ಬರೆಯುತ್ತಾನೆ.

 A:-ಶೀಲ ಕಥೆ ಬರೆಯುತ್ತಾಳೆ.

 

3.ಇಂದು ಮಳೆ ಬರುವ ಸಾಧ್ಯತೆ ಇವೆ.

A:-ಇಂದು ಮಳೆ ಬರುವ ಸಾಧ್ಯತೆ ಇದೆ.

 

4.ನಮ್ಮ ತರಗತಿಯಲ್ಲಿ ಹುಡುಗ ಇದ್ದಾರೆ .

A:-ನಮ್ಮ ತರಗತಿಯಲ್ಲಿ ಹುಡುಗರು ಇದ್ದಾರೆ.

 

5.ಕಾಡಿನಲ್ಲಿ ಮರಗಳು ಇದೆ.

A:-ಕಾಡಿನಲ್ಲಿ ಮರಗಳು ಇವೆ.

 

VIಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:-

 1.ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು ಯಾರು?

A:- ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು ವಿದ್ಯಾಸಾಗರ ನೆಂಬ

ಮಹಾನ್ ಪಂಡಿತ.

 

2.ವಿದ್ಯಾಸಾಗರರು ಕೃಷ್ಣದೇವರಾಯನಿಗೆ ಹಾಕಿದ ಸವಾಲು ಯಾವುದು?

A:-ವಿದ್ಯಾಸಾಗರರು ಕೃಷ್ಣದೇವರಾಯನಿಗೆ ನಾನು ನಿಮ್ಮ ಆಸ್ಥಾನದ ಪಂಡಿತರೊಡನೆ ವಾದಮಾಡಲು ಬಂದಿದ್ದೇನೆ ಎಂದು ಸವಾಲು ಹಾಕಿದರು.

 

 

3.ವಿದ್ಯಾಸಾಗರ ನೊಂದಿಗೆ ವಾದಮಾಡಲು ಒಪ್ಪಿಕೊಂಡವರು ಯಾರು.?

A:-ವಿದ್ಯಾಸಾಗರ ನೊಂದಿಗೆ ವಾದಮಾಡಲು ಒಪ್ಪಿಕೊಂಡವರು

ತೆನಾಲಿ ರಾಮಕೃಷ್ಣ.

 

4.ತೆನಾಲಿರಾಮಕೃಷ್ಣನ ವಾದಕ್ಕೆ ಯಾವ ಗ್ರಂಥವನ್ನು ಆರಿಸಿಕೊಂಡನು?

A:-ತೆನಾಲಿರಾಮಕೃಷ್ಣನ ವಾದಕ್ಕೆತಿಲಕಾಷ್ಠಮಹಿಷಬಂಧನ’ ಗ್ರಂಥವನ್ನು ಆರಿಸಿಕೊಂಡನು.

 

VIIಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ

1.ವಿದ್ಯಾಸಾಗರ ನು ಕೃಷ್ಣದೇವರಾಯನ ಆಸ್ಥಾನಕ್ಕೆ ಏಕೆ ಬಂದನು?

A:-ವಿದ್ಯಾಸಾಗರ ನು ಮಹಾನ್ ಮೇಧಾವಿ ಮತ್ತು ಪಂಡಿತನಾಗಿದ್ದ ನು ಅವನು ಕೃಷ್ಣದೇವರಾಯನ ಆಸ್ಥಾನದ ಪಂಡಿತರೊಡನೆ ವಾದಮಾಡಲು ಬಂದನು.

 

2.ವಿದ್ಯಾಸಾಗರ ಮುಖ ಏಕೆ ಅರಳಿತು?

 A:-ತೆನಾಲಿರಾಮಕೃಷ್ಣನ ತನ್ನ ಜೊತೆಯಲ್ಲಿ ವಾದಮಾಡಲು ಒಪ್ಪಿಕೊಂಡದ್ದನ್ನು ತಿಳಿದು ವಿದ್ಯಾಸಾಗರ ಮುಖ ಅರಳಿತು.

 

3.ತಿಲಕಾಷ್ಠ ಮಹಿಷ ಬಂಧನ ಎಂದರೇನು? 

 A:- ತಿಲಕಾಷ್ಠಮಹಿಷಬಂಧನ ಎಂದರೆ  ಎಮ್ಮೆ ಕಟ್ಟುವ ಹಗ್ಗದಿಂದ ಎಳ್ಳಿನ ಕಡ್ಡಿಗಳನ್ನು ಕಟ್ಟಿರುವುದು.

 

VII ಮಾತುಗಳನ್ನು ಯಾರು ಯಾರಿಗೆ ಹೇಳಿದರು

1.”ಈ ವಿಷಯ ಮೊದಲೇ ತಿಳಿದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ”

A:-ಈ ಮಾತನ್ನು ವಿದ್ಯಾಸಾಗರ ಪಂಡಿತ ಕೃಷ್ಣದೇವರಾಯನಿಗೆ ಹೇಳಿದನು.

 

2.” ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ”

 A:- ಮಾತನ್ನು ವಿದ್ಯಾಸಾಗರ ತೆನಾಲಿ ರಾಮಕೃಷ್ಣನಿಗೆ ಹೇಳಿದನು.

 

3.”ಮಹಾಪ್ರಭು ಏಕೋ ನನ್ನ ದೇಹಾರೋಗ್ಯ ಸರಿಯಿಲ್ಲ”

A:-ಈ ಮಾತನ್ನು ವಿದ್ಯಾಸಾಗರ ಕೃಷ್ಣದೇವರಾಯನಿಗೆ ಹೇಳಿದನು.

 

 

Post a Comment

0 Comments