ಪಾಠ-3 ವೀರಮಾತೆ ಜೀಜಾಬಾಯಿ
I ಪದಗಳ ಅರ್ಥ ಬರೆಯಿರಿ:-
1.ಪ್ರಣಾಮ ==ನಮಸ್ಕಾರ
2.ನಮ್ರತೆ ==ವಿನಯದಿಂದ ಕೂಡಿದ
3.ಗದ್ದಿಗೆ ==ಪೀಠ
4.ಪ್ರಾರಂಭ ==ಮೊದಲು
5. ಅಂತಿಮ ==ಕೊನೆ
6.ಶಾಶ್ವತ ==ನಾಶ ಹೊಂದದ
7.ಸ್ವಾಭಿಮಾನ ==ಆತ್ಮಗೌರವ
8.ಉದ್ಯೋಗ==ವೃತ್ತಿ
9.ಉನ್ನತಿ ==ಹಿರಿಮೆ
10.ಎದೆಗುಂದದೆ ==ಭಯವಿಲ್ಲದೆ
11.ನಿರ್ಧಾರ==ನಿಶ್ಚಯ
12.ಹೊಂಗನಸು ==ಸುಂದರ ಸ್ವಪ್ನ
13.ಚಾಣಾಕ್ಷ== ಸೂಕ್ಷ್ಮ ದೃಷ್ಟಿಯುಳ್ಳ ವನು
14.ಪಣ==ಪ್ರತಿಜ್ಞೆ
15.ಪತಾಕೆ ==ಧ್ವಜ
16.ಪರಕೀಯ ==ಬೇರೆಯ
17.ಗುಲಾಮಗಿರಿ ==ಅಡಿಯಾಳು ತನ
18.ವೈಭವ ==ಆಡಂಬರ
19.ಮುಕುಟ ==ಕಿರೀಟ
20.ಅಭಿವೃದ್ಧಿ ==ಅಬ್ದು ದಯ
II ಒಂದು ಪದದಲ್ಲಿ ಉತ್ತರಿಸಿ:-
1.ಗೆಲುವು ಸಿಕ್ಕಿದಾಗ ಆಚರಿಸುವ ಸಂತೋಷ ಸಮಾರಂಭ =ವಿಜಯೋತ್ಸವ
2.ಸಾರ್ವಭೌಮ ಅಧಿಕಾರವುಳ್ಳ ರಾಷ್ಟ್ರ =ಸಾಮ್ರಾಜ್ಯ .
3.ರಾಜನಾಗುವ ಅವನಿಗೆ ಪವಿತ್ರ ಜನಗಳಿಂದ ಅಭಿಷೇಕ ಮಾಡುವಿಕೆ= ಪಟ್ಟಾಭಿಷೇಕ.
IIIವಿರುದ್ಧ ಪದ ಬರೆಯಿರಿ:-
1.ಧೈರ್ಯ X ಧೈರ್ಯ
2.ಜಯ- X ಅಪಜಯ
3.ಗೌರವ X ಅಗೌರವ
4.ನೀತಿ X ಅನೀತಿ
IV ಸಮಾನಾರ್ಥಕ ಪದಗಳನ್ನು ಬರೆಯಿರಿ:-
1. ಸಾಗರ ==ಸಮುದ್ರ== ಕಡಲು
2. ಪುತ್ರ ==ಮಗ== ತನಯ
3.ರಾಜ== ಅರಸ== ನಾಯಕ
4.ಯುದ್ಧ== ಸಮರ== ಕದನ
V ಮಾದರಿಯಲ್ಲಿ ಸೂಚಿಸಿರುವಂತೆ ಪದ ರಚಿಸಿರಿ :-
1.ಬರು+ವಂತೆ ==ಬರುವಂತೆ
2.ಹೋಗು+ವಂತೆ ==ಹೋಗುವಂತೆ
3. ಬಾಯಿ + ಅರಿಕೆ ==ಬಾಯರಿಕೆ
4.ನೋಡು +ಅಂತೆ ==ನೋಡುವಂತೆ
5.ಮಗು+ ಅಂತೆ ==ಮಗುವಂತೆ
6.ಹುಡುಗ + ಆಟ ==ಹುಡುಗಾಟ
7. ಬಂದು + ಆಗ== ಬಂದಿದೆ ಬಂದಿದೆ
8.ಕಾಡು + ಆನೆ ==ಕಾಡಾನೆ
VIಕೊಟ್ಟಿರುವ ಪದಗಳನ್ನು ಓದಿರಿ:-
1.ಪದೇಪದೇ
2.ಸಣ್ಣ ಸಣ್ಣ
3.ಓಡಿ ಓಡಿ
4.ಬಾಬಾ
5. ಸರಸರ
6.ತಳತಳ
7.ಪಳಪಳ
8.ಟಣಟಣ
VII ಗಾದೆಮಾತುಗಳನ್ನು ಪೂರ್ತಿ ಮಾಡಿ:-
1.ತಾಳಿದವನು ಬಾಳಿಯಾನು
2.ಕೈ ಕೆಸರಾದರೆ ಬಾಯಿ ಮೊಸರು
3.ಮಾತು ಬೆಳ್ಳಿ ಮೌನ ಬಂಗಾರ
4.ಮನೆಗೆ ಮಾರಿ ಊರಿಗೆ ಉಪಕಾರಿ
VIII ಬಿಟ್ಟ ಸ್ಥಳವನ್ನು ತುಂಬಿರಿ:-
1.ಛತ್ರಪತಿ ಶಿವಾಜಿ ತಾಯಿಯ ಹೆಸರು ಜೀಜಾಬಾಯಿ.
2.ಜೀಜಾಬಾಯಿ ಶಹಾಜಿ ಎಂಬುವವನನ್ನು ವಿವಾಹವಾದಳು.
3.ಜಿಜಾಬಾಯಿ ಶಿವಾಜಿಗೆ ಪ್ರತಿನಿತ್ಯ ರಾಮಾಯಣ ಮತ್ತು ಮಹಾಭಾರತ ಕಥೆಗಳನ್ನು ಹೇಳುತ್ತಿದ್ದಳು.
4.ಶಿವಾಜಿ ಪಟ್ಟಾಭಿಷೇಕ ರಾಯಗಡದಲ್ಲಿ ನಡೆಯಿತು.
5.ಮನೆಯೇ ಮೊದಲ ಪಾಠಶಾಲೆ.
6.ಜನನಿ ತಾನೆ ಮೊದಲ ಗುರುವು.
IX ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು:-
1.”ಮಾತಾಜಿ ಅವರಿಗೆ ನನ್ನ ಪ್ರಣಾಮಗಳು”
A:-ಈ ಮಾತನ್ನು ಶಿವಾಜಿ ಜೀಜಾಬಾಯಿ ಗೆ ಹೇಳಿದನು.
2.”ನೀನು ಗೆದ್ದು ನನಗೆ ಬಹುಮಾನವಾಗಿ ಕೊಡಬೇಕು”
A:-ಈ ಮಾತನ್ನು ಜಿಜಾಬಾಯಿ ಶಿವಾಜಿಗೆ ಕೇಳಿದಳು.
Xಈ ಪದಗಳನ್ನು ಜೋಡಿಸಿ ಸರಿಯಾದ ವಾಕ್ಯ ರಚಿಸಿ ಬರೆಯಿರಿ:-
1.ತಾಯಿ ನೀಡುತ್ತೇನೆ ಕೇಳು ಅಗತ್ಯವಾಗಿ.
A:-ಕೇಳು ತಾಯಿ ಅಗತ್ಯವಾಗಿ ನೀಡುತ್ತೇನೆ.
2.ಚಾಣಾಕ್ಷ ಜೀಜಾಬಾಯಿ ಹೆಣ್ಣುಮಗಳು.
A:-ಜೀಜಾಬಾಯಿ ಚಾಣಾಕ್ಷ ಹೆಣ್ಣುಮಗಳು.
3.ಪಟ್ಟಾಭಿಷೇಕವು ಅತಿ ಶಿವಾಜಿಯ ನಡೆಯಿತು ವೈಭವದಿಂದ.
A:-ಶಿವಾಜಿಯ ಪಟ್ಟಾಭಿಷೇಕವು ಅತಿ ವೈಭವದಿಂದ ನಡೆಯಿತು.
XIಈ ಕೊಟ್ಟಿರುವ ಪದಗಳನ್ನು ಬಳಸಿ ಸ್ವಂತ ವಾಕ್ಯವನ್ನು ರಚಿಸಿ:-
1.ಬಹುಮಾನ --ನನಗೆ ಶಾಲೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿತು.
2.ಉದ್ಯೋಗ --ನಾನು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗವನ್ನು ಸಂಪಾದಿಸುತ್ತೇನೆ.
3.ಗುಲಾಮಗಿರಿ --ನಾವು ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದೆವು.
4.ವೈಭವ --ನಾವು ಹಬ್ಬಗಳನ್ನು ವೈಭವದಿಂದ ಆಚರಿಸುತ್ತೇವೆ.
5.ಆಶೀರ್ವಾದ --ಶಿವಾಜಿ ತನ್ನ ತನ್ನ ತಾಯಿಯ ಆಶೀರ್ವಾದವನ್ನೂ ಪಡೆದುಕೊಂಡನು.
XIIಒಂದು ವಾಕ್ಯದಲ್ಲಿ ಉತ್ತರಿಸಿ:-
1.ತಾಯಿಗೆ ಮಗನು ಏನೆಂದು ಕೇಳಿದನು?
A:-ತಾಯಿಗೆ ಮಗನು ಅಮ್ಮ ನನ್ನನ್ನು ಕರೆಸಿದ ಕಾರಣವೇನು ನನ್ನನ್ನು ನನ್ನಿಂದ ಏನಾಗಬೇಕು ಎಂದು ಕೇಳಿದನು.
2.ಕೊಂಡಾಣ ದುರ್ಗ ಯಾರ ವಶದಲ್ಲಿತ್ತು?
A:-ಕೊಂಡಾಣದುರ್ಗಾ ಮೊಘಲರ ವಶದಲ್ಲಿತ್ತು.
3.ಜೀಜಾಬಾಯಿಯ ತಂದೆ ಹೆಸರೇನು?
A:-ಜೀಜಾಬಾಯಿ ಅವರ ತಂದೆ ಹೆಸರು ಲಕ್ಕುಜಿ ಜಾಧವ್ ರಾವ್.
4.ಶಿವಾಜಿಯ ಗುರುವಿನ ಹೆಸರೇನು?
A:-ಶಿವಾಜಿಯ ಗುರುವಿನ ಹೆಸರು ದಾದಾಜಿಕೊಂಡದೇವ.
XIIIಚಟುವಟಿಕೆ:-
ಶಿವಾಜಿ ಮತ್ತು ಜೀಜಾಬಾಯಿಯ ಚಿತ್ರವನ್ನು ಸಂಗ್ರಹಿಸಿ ಅಂಟಿಸಿ
0 Comments