4th standard Kannada(ಮಳೆ)

 

ಪಾಠ--4 ಮಳೆ

Iಪದಗಳ ಅರ್ಥ ಬರೆಯಿರಿ:-

1.ಕಡಲು ==ಸಮುದ್ರ

2.ಅಡ್ಡ ==ತಡೆ

3.ಬೆಳಗು ==ಪ್ರಕಾಶಿಸು

4.ಕವಿಯಿತು ==ಆವರಿಸಿತು

5. ನೆಲ ==ಭೂಮಿ

6.ಜಗ ==ಲೋಕ

7.ಸುರಿ =ಕೆಳಕ್ಕೆ ಬೀಳು

8.ತಂಪಾಗಿ ==ತಣಿದು

 

IIಒಂದು ಪದದಲ್ಲಿ ಉತ್ತರಿಸಿ

1.ಗುಡುಗು ಗಿಂತ ಮುಂಚೆ ಆಕಾಶದಲ್ಲಿ ಕಂಡುಬರುವ ಬೆಳಕಿನ ಬಳ್ಳಿ ==ಮಿಂಚು.

2. 24 ನಿಮಿಷದ ಅವಧಿ ಗಳಿಗೆ ==ಗಳಿಗೆ.

 

III ಬಿಟ್ಟ ಸ್ಥಳವನ್ನು ತುಂಬಿರಿ:-

1.ಮುತ್ತಿನಂತ ಮಳೆಯನೀರು ಕೆಳಗೆ ಸುರಿಯಿತು.

2.ನೆಲದ ಮೇಲೆ ಗುಡ್ಡಬೆಟ್ಟ ಅಡ್ಡವಾಯಿತು.

3. ಗಳಿಗೆ ಯೊಳಗೆ ಬಾನು ತುಂಬಾ ಮೋಡ ಕವಿಯಿತು. 

4.ಅಂತರ್ಜಲ ಸಂರಕ್ಷಿಸಿ ಜೀವಕುಲ ಉಳಿಸು.

5.ಮೋಡ ಮೇಲಕೇರಿ ದಾಗ ತಂಪು ತಗಲಿತ್ತು.

 

IV.ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ:-

1.ಕೆರೆ-ಕಟ್ಟೆ, ಸಮುದ್ರ ,ಸೂರ್ಯ =ಸೂರ್ಯ

2.ಮಿಂಚು, ಭೂಮಿ, ಮಳೆ, ಗುಡುಗು =ಭೂಮಿ

3.ಸರೋವರ ,ಪರ್ವತ ,ಬೆಟ್ಟ-ಗುಡ್ಡ =ಸರೋವರ

4.ನಗ, ಕುಂಟೆ ,ನೇಗಿಲು ,ಮಂಚ =ಮಂಚ

 

ನಾನಾರ್ಥಕ ಪದಗಳನ್ನು ಬರೆಯಿರಿ:-

1.ಕಾಡು =ಅರಣ್ಯ =ಅಡವಿ =ಕಾನನ

2.ಸೂರ್ಯ =ಉದಯ= ಇನ=ಭಾನು

3.ಭೂಮಿ =ಇಳೆ= ವಸುಂಧರ =ಪೃಥ್ವಿ

 

VIಪದಬಂಧವನ್ನು ಪೂರ್ಣಗೊಳಿಸಿ:-

 ಎಡದಿಂದ ಬಲಕ್ಕೆ

1. 24 ನಿಮಿಷಗಳನ್ನು ಹೀಗೆ ಹೇಳುತ್ತಾರೆ =ಗಳಿಗೆ

2.ಜೀವರಾಶಿ ನೆಲೆಸಿರುವ ಪ್ರಪಂಚ =ಜಗತ್ತು

3.ಕೆರೆ ಜೊತೆಯಲ್ಲಿರುವ ಜೋಡಿಪದ =ಕಟ್ಟೆ

4.ನಾವು ನಿಂತಿರುವ ಸ್ಥಳ =ನೆಲ

6.ಬೇಸಿಗೆ ಕಾಲದ ಪ್ರಭಾವವಿದು ==ಬಿಸಿಲು

7.ಮೋಡ ಕರಗಿ ಬಿಡುವುದು ==ಮಳೆ

8.ಮೇಲೆ ನೋಡಿದಾಗ ಕಾಣುವುದು== ಮುಗಿಲು

9.ಈ ಸಮಯ ಮುತ್ತಿನಂತ ಹುದು =ಹೊತ್ತು

1. ಗಟ್ಟಿಯಾದ ಪದಾರ್ಥ= ಘನ

2.ನೀರಿನ ಮತ್ತೊಂದು ಹೆಸರು= ಜಲ

3..ಇದರೊಳಗಿರುವ ಉಪ್ಪಿನ ನೀರು= ಕಡಲು

5.ಭೂಮಿಗೆ ಇರುವ ಇನ್ನೊಂದು ಹೆಸರು =ಇಳೆ

6.ಮಲ್ಲಿಗೆ ಬಣ್ಣ =ಬಿಳಿ

7.ವಾಸ ಮಾಡಲು ಇದು ಬೇಕು =ಮನೆ

8.ಕಪ್ಪೆಚಿಪ್ಪಿನ ಲ್ಲಿರುವುದು =ಮುತ್ತು

 

VII ಜೋಡುನುಡಿ ಗಳನ್ನು ಬರೆಯಿರಿ:-

1.ಬೆಟ್ಟ-ಗುಡ್ಡ ಕೆರೆಕಟ್ಟೆ

2.ಗುಡುಗು-ಸಿಡಿಲು

3.ಮುತ್ತು- ರತ್ನ

 

VIII ಒಂದು ವಾಕ್ಯದಲ್ಲಿ ಉತ್ತರಿಸಿ:-

1.ಬಿಸಿಲ ಜಳಕೆ ನೀರು ಏನಾಯಿತು

A:- ಬಿಸಿಲ ಝಳಕ್ಕೆ ನೀರು ಆವಿಯಾಯಿತು

2.ಮಳೆ ಸುರಿದಿದ್ದರಿಂದ ಏನೇನು ತುಂಬಿ ಹರಿಯಿತು?

A:-ಮಳೆ ಸುರಿದಿದ್ದರಿಂದ ಕೆರೆ ತೊರೆ ಹಳ್ಳ ಹೊಳೆ ತುಂಬಿ ಹರಿಯಿತು.

 

3.ಮೋಡ ಯಾವಾಗ ಭಾರವಾಯಿತು ?

A:-ಮೋಡ ಮೇಲಕ್ಕೇರಿ ಆವಿ ತಣಿದಾಗ ಭಾರವಾಯಿತು.

 

4.ಮಳೆ ಪದ್ಯವನ್ನು ಬರೆದ ಕವಿಯ ಹೆಸರೇನು?

A:-ಕವಿಯ ಹೆಸರು ಪಳಕಳ ಸೀತಾರಾಮಭಟ್ಟ.

 

Post a Comment

0 Comments