4th standard Kannada(ಅಜ್ಜಿಯತೋಟದಲ್ಲಿಒಂದು ದಿನ)

 

ಪಾಠ -5 ಅಜ್ಜಿಯತೋಟದಲ್ಲಿಒಂದು ದಿನ

 Iಪದಗಳ ಅರ್ಥ ಬರೆಯಿರಿ:-

1.ಧನ್ಯವಾದ==ಕೃತಜ್ಞತೆ ಅರ್ಪಿಸುವುದು

2.ವಿಶಾಲ ==ವಿಸ್ತಾರ

3.ಪ್ರಕೃತಿ ==ನಿಸರ್ಗ

4.ವಿಧಾನ ==ರೀತಿ

5. ಹೆಕ್ಕು== ಆರಿಸು

6.ಬಹುಶಃ ==ಬಹುಕೇತ

7.ಹರಡು== ಹಬ್ಬು

8.ತೋಡು ==ಕಾಲುವೆ

 

 IIಒಂದು ಪದದಲ್ಲಿ ಉತ್ತರಿಸಿ:-

1.ಪಶ್ಚಿಮಘಟ್ಟಗಳಿಂದ ಕೂಡಿದ ಕರ್ನಾಟಕದ ಭೂಭಾಗ ==ಮಲೆನಾಡು

2.ತೆನೆ ಕೊಡುವ ಬೆಳೆ== ಪೈರು

3.ನೇಗಿಲನ್ನು ಎಳೆಯಲು ಎತ್ತಿನ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು =ನೊಗ

4.ಭೂಮಿಯನ್ನು ಉಳುವ ಸಾಧನ ==ನೇಗಿಲು

5.ಕೆಲಸ ಮಾಡುವ ಸಾಧನ== ಯಂತ್ರ

6.ಅತ್ಯಂತ ಚಿಕ್ಕದಾಗಿರುವ ಅಂತಹುದು ==ಸೂಕ್ಷ್ಮ

7.ತೋಟವನ್ನು ಬೆಳೆಸುವುದು ==ತೋಟಗಾರಿಕೆ

8.ಭೂಮಿ ಒಳಗಿನ ನೀರು ==ಅಂತರ್ಜಲ

 9.ಹೊಲಗದ್ದೆಗಳ ಅಂಚಿನಲ್ಲಿ ರಚಿಸಿರುವ ಮಣ್ಣಿನ ದಂಡೆ ==ಬದು

10.ನೀರು ತುಂಬಿದ ತಗ್ಗುಪ್ರದೇಶ =ಹೊಂಡ

 

 IIIಬಿಟ್ಟಿರುವ ಸ್ಥಳವನ್ನು ತುಂಬಿರಿ :-

1.ಕಿಶೋರ ಅಜ್ಜಿಯ ಮನೆ ಬೆಟ್ಟದ ತಪ್ಪಲಿನಲ್ಲಿದೆ.

 

2.ಮನೆಯ ಹಿಂದಿನ ಗುಡ್ಡದಲ್ಲಿ ಗೇರು ಮರಗಳಿವೆ.

 

3.ಮಳೆಯ ನೀರನ್ನು ಇಂಗುಗುಂಡಿಗಳ ಮೂಲಕ ಇಂಗಿ ಸುತ್ತೇವೆ.

 

4.ಅಜ್ಜಿ ಎಲ್ಲರಿಗೂ ಗೋಡಂಬಿ ಹಂಚಿದಳು.

 

 

IVಹೊಂದಿಸಿ ಬರೆಯಿರಿ:-

1.ಎರೆಹುಳು                       ರೈತನ ಮಿತ್ರ

2.ಕೊಕ್ಕೋ                        ಚಾಕಲೇಟ್

3.ತೆನೆ                                ಬತ್ತ

4.ಮಳೆಕೊಯ್ಲು                 ಅಂತರ್ಜಲ

 5.ಹಟ್ಟಿಗೊಬ್ಬರ                ಸಾವಯವ ಗೊಬ್ಬರ

 

Vಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ:-

1.ತೆಂಗು, ಅಡಿಕೆ, ಬಾಳೆ, ಭತ್ತ =ಬತ್ತ

2. ಮೊಲ ,ಹಂದಿ, ಮುಂಗುಸಿ, ಚಿಟ್ಟೆ=ಚಿಟ್ಟೆ

3.ಸೀಬೆಕಾಯಿ ,ಸಪೋಟ, ಅನಾನಸು, ಕೋಕೋ =ಕೋಕೋ 

 

VI ಈ ಪದಗಳನ್ನು ಕೂಡಿಸಿ ಬರೆಯಿರಿ:-

1.ಒಂದು + ಆದ ==ಒಂದಾದ

2.ಇಲ್ಲಿ + ಒಂದು ==ಇಲ್ಲೊಂದು

3. ಹೇರಳ + ಹಾಗೆ ==ಹೇರಳವಾಗಿ

4.ಹದ +ಆಗಿತ್ತು ==ಹದವಾಗಿತ್ತು

 

 VII ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ:-

1.ಕಿರುಚು --ನಾವು ಮನೆಯಲ್ಲಿ ಜೋರಾಗಿ ಕಿರುಚಿ ಬಾರದು.

2.ಹೊರಸಂಚಾರ-- ನಾವು ನಮ್ಮ ಶಾಲೆಯಿಂದ ಹೊರ ಸಂಚಾರಕ್ಕೆ ಹೋಗಿದ್ದೆವು.

3. ಆರೈಕೆ --ನಮ್ಮ ಅಮ್ಮ ನನ್ನನ್ನು ತುಂಬಾ ಆರೈಕೆ ಮಾಡುತ್ತಾಳೆ.

4.ಹುಲುಸಾಗಿ--ತೋಟದಲ್ಲಿ ಗಿಡಮರಗಳು ಹುಲುಸಾಗಿ ಬೆಳೆದಿದ್ದವು.

 .

VIIIನೀರಿನ ಮೂಲಗಳನ್ನು ಬರೆಯಿರಿ:-

 ಕೊಳ,    ತೊರೆ ,ಬಾವಿ ,ಹೊಳೆ ,ಸಾಗರ ,ಸಮುದ್ರ ನದಿ ,ಕೊಳವೆ ಬಾವಿ ,ಸರೋವರ ,ಹಳ್ಳ ,ಕಡಲು, ಕಟ್ಟೆ, ಮಳೆ, ಹಳ್ಳ ,ಕೆರೆ,

 

IX ಒಂದು ವಾಕ್ಯದಲ್ಲಿ ಉತ್ತರಿಸಿ:-

1. ಮಕ್ಕಳು ಎಲ್ಲಿಗೆ ಹೊರಸಂಚಾರ ಹೊರಟರು?

A:-ಮಕ್ಕಳು ಕಿಶೋರ ಅಜ್ಜಿಯ ತೋಟಕ್ಕೆ ಗುರುಗಳೊಂದಿಗೆ ಹೊರಸಂಚಾರ ಹೊರಟರು.

 

2.ಸಾಮಾನ್ಯವಾಗಿ ಹೊಲವನ್ನು ಯಾವುದರಿಂದ ಉಳುತ್ತಾರೆ?

A:-ಸಾಮಾನ್ಯವಾಗಿ ಹೊಲವನ್ನು ನೇಗಿಲಿನಿಂದ ಉಳುತ್ತಾರೆ.

 

3.ಎರೆಗೊಬ್ಬರವನ್ನು ಯಾವುದರಿಂದ ತಯಾರಿಸುತ್ತಾರೆ?

A:-ಎರೆ ಗೊಬ್ಬರವನ್ನು ಎರೆಹುಳು ವಿನಿಂದ ತಯಾರಿಸುತ್ತಾರೆ .

 

4.ತೋಟದಲ್ಲಿ ಹೆಚ್ಚಾಗಿ ಯಾವ ಗೊಬ್ಬರವನ್ನು ಬಳಸುತ್ತಿದ್ದರು?

A:-ತೋಟದಲ್ಲಿ ಹೆಚ್ಚಾಗಿ ಸಾವಯವ ಗೊಬ್ಬರವನ್ನು ಬಳಸುತ್ತಿದ್ದರು.

 

5.ಶೀಲಾ ಅಜ್ಜಿಯ ಮನೆಯಂಗಳದಲ್ಲಿ ಯಾವ ಯಂತ್ರವನ್ನು ನೋಡಿದಳು?

A:-ಶೀಲಾ ಅಜ್ಜಿಯ ಮನೆಯ ಅಂಗಳದಲ್ಲಿ ಗದ್ದೆ ಉಳುವ ಯಂತ್ರವನ್ನು ನೋಡಿದಳು.

 

Xಎರಡು-ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ:-

1.ಅಜ್ಜಿಯ ತೋಟದಲ್ಲಿ ಯಾವ ಯಾವ ಗಿಡಗಳಿದ್ದವು?

A:-ಅಜ್ಜಿಯ ತೋಟದಲ್ಲಿ ಬಾಳೆ ಅಡಿಕೆ ತೆಂಗು ಕಾಳುಮೆಣಸು ಕಾಫಿ ಏಲಕ್ಕಿ ಮೊದಲಾದ ಗಿಡಗಳಿದ್ದವು.

 

2.ಉಳುಮೆಯ ಬಗ್ಗೆ ಗುರುಗಳು ನೀಡಿದ ವಿವರಣೆ ಏನು?

A:-ಹಿಂದೆ ನೇಗಿಲು ನೊಗ ಎತ್ತು ಕೋಣಗಳನ್ನು ಹೊಲ ಉಳಲು ಬಳಸಿಕೊಳ್ಳುತ್ತಿದ್ದರು, ಈಗ ಹೊಸ ಹೊಸ ಸಾಧನಗಳು ಬಂದಿವೆ ಎಂದು ಗುರುಗಳು ಹೇಳಿದರು.

 

3.ಇಂಗುಗುಂಡಿಯ ಪ್ರಯೋಜನಗಳೇನು?

A:-ಇಂಗು ಗುಂಡಿಗಳು ಮಳೆಯ ನೀರನ್ನು ಇಂಗಿಸುತ್ತವೆ ಮತ್ತು ಅಂತರ್ಜಲವನ್ನು ಹೆಚ್ಚಿಸುತ್ತವೆ ಇದರಿಂದ ನಮ್ಮ ಬಾವಿಯ ನೀರು ಎಂದು ಕಡಿಮೆ ಎಂದು ಕಡಿಮೆಯಾಗುವುದಿಲ್ಲ.

 

Post a Comment

0 Comments