ಪಾಠ- 6 ದೊಡ್ಡವರು ಯಾರು
Iಪದಗಳ ಅರ್ಥ ಬರೆಯಿರಿ:-
1.ಸಂಸಾರ== ಪರಿವಾರ
2.ವರ ==ಮದುವೆಯಾಗುವ ಹುಡುಗ
3.ಜಗತ್ತು== ಪ್ರಪಂಚ
4.ತಕ್ಕ== ಯೋಗ್ಯವಾದ
5.ಸೂರ್ಯ== ರವಿ
6.ಬೆಟ್ಟ== ಪರ್ವತ
7.ಸಂಭ್ರಮ ==ಉತ್ಸಾಹ
8.ವಿಚಾರ ==ವಿಷಯ
9. ಬಹಳ ==ಹೆಚ್ಚು
10.ಮದುವೆ= ಲಗ್ನ =ವಿವಾಹ
II ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ:-
1. ಯೋಚಿಸು --ನಾನು ಯಾವುದೇ ಕೆಲಸವನ್ನು ಮಾಡುವಾಗ ಯೋಚಿಸುತ್ತೇನೆ.
2.ತೀರ್ಮಾನಿಸು-- ನಾವು ಒಳ್ಳೆಯದು-ಕೆಟ್ಟದ್ದು ಯಾವುದು ಎಂದು ತೀರ್ಮಾನಿಸಬೇಕು.
3. ಸಮರ್ಥ-- ನಾನು ಒಬ್ಬ ಸಮರ್ಥ ವಿದ್ಯಾರ್ಥಿ.
4.ಮದುವೆ --ನಾನು ನನ್ನ ಅಕ್ಕನ ಮದುವೆಗೆ ಹೋಗಬೇಕು.
III ಬಿಟ್ಟಿರುವ ಸ್ಥಳವನ್ನು ತುಂಬಿರಿ:-
1.ನವಿಲು ಸುಂದರವಾದ ಪಕ್ಷಿ.
2.ಪಲ್ಲವಿ ಬಹಳ ಬುದ್ಧಿವಂತ ವಿದ್ಯಾರ್ಥಿನಿ.
3.ಕೋಗಿಲೆ ಇಂಪಾಗಿ ಹಾಡುತ್ತದೆ .
4.ಮೋಹನ ಚೆನ್ನಾಗಿ ನೃತ್ಯ ಮಾಡುತ್ತಾನೆ .
5.ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ.
IV ಪ್ರಾಣಿ ಪಕ್ಷಿಗಳ ಕೂಗನ್ನು ಹೊಂದಿ ಸಿರಿ:-
1.ಕೋಳಿ ಕೊಕ್ಕೊಕ್ಕೋ
2.ಕಾಗೆ ಕಾವ್ ಕಾವ್
3.ಬೆಕ್ಕು ಮಿಯಾವ್ ಮಿಯಾವ್
4.ನಾಯಿ ಬೌ ಬೌ
5.ಕೋಗಿಲೆ ಕುಹೂ ಕುಹೂ
V ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ:-
ಹಸು ಇಲಿ ತೋಳ ಹುಲಿ ಕರಡಿ ನರಿ ಎಮ್ಮೆ ಕತ್ತೆ
VI ಸರಿ-ತಪ್ಪುಗಳನ್ನು ಗುರುತಿಸಿ:-
1.ಒಂದು ಊರು ಅಲ್ಲೊಂದು ಹುಲಿಗಳ ಸಂಸಾರ ಇತ್ತು --ತಪ್ಪು
2.ಮಗನಿಗೆ ಸರಿಯಾದ ವರಬೇಕೆಂದು ಇಲಿಗಳು ಯೋಚಿಸಿದವು--ತಪ್ಪು
3.ಬೆಟ್ಟದ ರಾಜನ ಬಳಿಗೆ ಇರುವೆಗಳು ಹೋದವು --ಸರಿ
VII ಕೊಟ್ಟಿರುವ ಪದಗಳನ್ನು ಸರಿಯಾಗಿ ಜೋಡಿಸಿ ವಾಕ್ಯವನ್ನು ರಚಿಸಿ
1.ತಂದೆ ಇಲಿಗಳು ಯೋಚಿಸಿದರು ತಾಯಿ.
A:- ತಂದೆ-ತಾಯಿ ಇಲಿಗಳು ಯೋಚಿಸಿದರು ಯೋಚಿಸಿದೆವು.
2.ಬೆಳಗುವ ಬಹಳ ಸೂರ್ಯ ದೊಡ್ಡವನು ಜಗತ್ತನ್ನೇ .
A:-ಜಗತ್ತನ್ನೆ ಬೆಳಗುವ ಸೂರ್ಯ ಬಹಳ ದೊಡ್ಡವನು.
3.ಇಲಿಗಳು ಬೆಟ್ಟದ ಹೋದವು ಬಳಿಗೆ ರಾಜನ.
A:-ಇಲಿಗಳು ಬೆಟ್ಟದ ರಾಜನ ಬಳಿಗೆ ಹೋದವು.
VIIIಈ ಮಾತನ್ನು ಯಾರು ಯಾರಿಗೆ ಹೇಳಿದರು:-
1.”ಜಗತ್ತನ್ನೆ ಬೆಳಗುವ ಸೂರ್ಯ ಬಹಳ ದೊಡ್ಡವನು”
A:-ಈ ಮಾತನ್ನು ತಾಯಿ ಇಲಿ ತಂದೆ ಇಲಿಗೆ ಹೇಳಿತು.
2.”ಇಲ್ಲ ಇಲ್ಲ ನನಗಿಂತಲೂ ದೊಡ್ಡವನು ಬೆಟ್ಟದ ರಾಜನಿದ್ದಾನೆ”
A:-ಮೋಡವು ಇಲಿಗಳಿಗೆ ಹೇಳಿತು.
3.’”ನಮ್ಮ ಮಗಳಿಗೆ ಇವನೇ ತಕ್ಕ ವರ”
A:-ಈ ಮಾತನ್ನು ತಂದೆ ಇಲಿ ಹೇಳಿತು ತಾಯಿ ಇಲಿಗೆ.
IX ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ:-
1.ಇಲಿಗಳ ಸಂಸಾರ ಎಲ್ಲಿ ವಾಸವಾಗಿತ್ತು?
A:-ಇಲಿಗಳ ಸಂಸಾರ ಒಂದು ಊರಿನಲ್ಲಿ ವಾಸವಾಗಿತ್ತು.
2.ತಂದೆ-ತಾಯಿ ಇಲಿಗಳು ಏನೆಂದು ಯೋಚಿಸಿದರು
A:-ತಂದೆ-ತಾಯಿ ಇಲಿಗಳು ಮಗಳಿಗೆ ತಕ್ಕ ವರನನ್ನು ಹುಡುಕಬೇಕೆಂದು ಯೋಚಿಸಿದರು.
3.ತಾಯಿ ಏನೆಂದು ಹೇಳಿತು?
A:-ಜಗತ್ತನ್ನೆ ಬೆಳಗುವ ಸೂರ್ಯ ಬಹಳ ದೊಡ್ಡವನು ಅವನೇ ನಮ್ಮ ಮಗಳಿಗೆ ತಕ್ಕ ವರ ಎಂದು ತಾಯಿ ಹೇಳಿತು.
4.ಜಗತ್ತನ್ನು ಬೆಳಗುವ ವರು ಯಾರು?
A:-ಜಗತ್ತನ್ನು ಬೆಳಗುವ ವರು ಸೂರ್ಯ.
5.ಸೂರ್ಯನಿಗೆ ಇಲಿಗಳು ಯಾವ ವಿಚಾರ ತಿಳಿಸಿದರು
A:-ಸೂರ್ಯನಿಗೆ ಇಲಿಗಳು ಮದುವೆಯ ವಿಚಾರ ತಿಳಿಸಿದರು.
6.ಯಾರ ಜೊತೆಯಲ್ಲಿ ಇಲಿಯ ಮದುವೆಯಾಯಿತು?
A:-ಇಲಿ ರಾಯನ ಜೊತೆಯಲ್ಲಿ ಇಲಿಯ ಮದುವೆಯಾಯಿತು
Xಚಟುವಟಿಕೆ:-
1.ಇಲಿಗಳ ಚಿತ್ರವನ್ನು ಅಂಟಿಸಿ
0 Comments