ಸರ್ವಜ್ಞನ ತ್ರಿಪದಿಗಳು
I ಪದಗಳ ಅರ್ಥ ಬರೆಯಿರಿ:-
1. ಇಕ್ಕು =ಇರಿಸು
2. ನನ್ನಿ= ನಿಜ
3.ಬಿನ್ನಾಣ =ಬೆಡಗು
4.ಅಗ್ನಿ= ಬೆಂಕಿ
5.ಕುಲಗೋತ್ರ =ವಂಶ
6.ಆಪತ್ತು= ಅಪಾಯ
7.ಬಗ್ಗೆ= ರೀತಿ
IIಒಂದು ಪದದಲ್ಲಿ ಉತ್ತರಿಸಿ:-
1.ಪ್ರಯಾಣ ಕಾಲಕ್ಕಾಗಿ ಕಟ್ಟಿ ಸಿದ್ಧಪಡಿಸಿದ ಮೊಸರನ್ನ ರೊಟ್ಟಿ ಮೊದಲಾದುವುಗಳು ---ಬುತ್ತಿ
2.ಮೂರು ಸಾಲುಗಳನ್ನು ಹೊಂದಿರುವ ಪದ್ಯ ----ತ್ರಿಪದಿ
3.ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ---ಪರರಿಗೆ
4.ಪಾಪದಾ ನೆಲೆಗಟ್ಟು---- ಕೋಪ
5.ತನ್ನಂತೆ ಪರರನ್ನು--- ಬಗೆಯಬೇಕು
6.ನಡೆವುದೊಂದೆ ಭೂಮಿ ಕುಡಿಯುವುದೊಂದೇ--- ನೀರು
7.ಜಾತಿಹೀನನ ಮನೆಯ ಜ್ಯೋತಿ ---ಹೀನವೇ ಅಲ್ಲ
8.ನುಡಿದಂತೆ ನಡೆ ನಡೆದಂತೆ--- ನುಡಿ
III ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ:-
1.ಯಾರ ಮನೆಯ ಜ್ಯೋತಿಯು ಹೀನವೇ ಅಲ್ಲ?
A:-.ಜಾತಿಹೀನನ ಮನೆಯ ಜ್ಯೋತಿ ಯು ಹೀನವೇ ಅಲ್ಲ
2.ಪರರನ್ನು ಏನೆಂದು ಬಗೆಯಬೇಕು ?
A.ಪರರನ್ನು ತನ್ನಂತೆ ಬಗೆಯಬೇಕು
3.ಕೊಟ್ಟಿದ್ದು ತನಗೆ ಆದರೆ ಬಚ್ಚಿಟ್ಟಿದ್ದು ಯಾರಿಗೆ ?
A.ಕೊಟ್ಟಿದ್ದು ತನಗೆ ಆದರೆ ಬಚ್ಚಿಟ್ಟಿದ್ದು ಪರರಿಗೆ
4.ಪಾಪದ ನೆಲೆಗಟ್ಟು ಯಾವುದು?
A.ಪಾಪದಾ ನೆಲೆಗಟ್ಟು ಕೋಪ
5.ಕೈಲಾಸ ಯಾವಾಗ ಬಿನ್ನಾಣ ವಾಗುವುದು?
A.ಅನ್ನವನ್ನು ಇಟ್ಟು ಪ್ರೀತಿಯಿಂದ ಮಾತನಾಡಿ ತನ್ನಂತೆ ಪರರನ್ನು ಬಗೆದಾಗ ಕೈಲಾಸ ಬಿನ್ನಾಣ ವಾಗುವುದು
6.ಕುಲಗೋತ್ರಗಳ ನಡುವೆ ಭಿನ್ನತೆ ಏಕೆ ಇರಬಾರದು?
A.ನಡೆವುದೊಂದೇ ಭೂಮಿಯಾಗಿ ಕುಡಿಯುವುದೊಂದೇ ನೀರು ಆಗಿರುವಾಗ ಬಳಸುವ ನಮಗೆ ಕುಲಗಳ ನಡುವೆ ಭಿನ್ನತೆ ಇರಬಾರದು
0 Comments